ನಾಗರಿಕ ಸೇವೆಗಳಿಗೆ ಸಿವಿಲ್ ಇಂಜಿನಿಯರ್ ಗಳು ಬರಬೇಕು, ಮೆಕ್ಯಾನಿಕಲ್ ಇಂಜಿನಿಯರ್ ಗಳಲ್ಲ: ತ್ರಿಪುರಾ ಸಿಎಂ

ಮಹಾಭಾರತದ ಕಾಲಘಟದಲ್ಲೇ ಇಂಟರ್ ನೆಟ್ ಇತ್ತು ಎಂದು ಹೇಳಿದ್ದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಈಗ ಅಂಥಹದ್ದೇ ಮತ್ತೊಂದು ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ತ್ರಿಪುರಾ ಮುಖ್ಯಮಂತ್ರಿ
ತ್ರಿಪುರಾ ಮುಖ್ಯಮಂತ್ರಿ
ನವದೆಹಲಿ: ಮಹಾಭಾರತದ ಕಾಲಘಟದಲ್ಲೇ ಇಂಟರ್ ನೆಟ್ ಇತ್ತು ಎಂದು ಹೇಳಿದ್ದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಈಗ ಅಂಥಹದ್ದೇ ಮತ್ತೊಂದು ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. 
ನಾಗರಿಕ ಸೇವಾ ಪರೀಕ್ಷೆಗಳಲ್ಲಿ(ಸಿವಿಲ್ ಸರ್ವಿಸ್ ಪರೀಕ್ಷೆ) ಸಿವಿಲ್ ಇಂಜಿನಿಯರ್ ಗಳು ಹೋಗಬೇಕು, ಮೆಕ್ಯಾನಿಕಲ್ ಇಂಜಿನಿಯರ್ ಗಳಲ್ಲ, ಸಿವಿಲ್ ಇಂಜಿನಿಯರ್ ಗಳಿಗೆ ಆಡಳಿತ ನಡೆಸುವುದು ಸಮಾಜವನ್ನು ನಡೆಸುವುದು ತಿಳಿದಿರುತ್ತದೆ ಆದ್ದರಿಂದ ಮೆಕ್ಯಾನಿಲಕ್ ಇಂಜಿನಿಯರ್ ಗಳಿಗಿಂತ ಸಿವಿಲ್ ಇಂಜಿನಿಯರ್ ಗಳು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. 
ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರು ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಬಾರದು ಎಂದಿರುವ ಬಿಪ್ಲಬ್ ದೇವ್. ಹಿಂದೆಲ್ಲಾ ಬಿಎ ಪದವೀಧರರು ಐಎಎಸ್ ಪರೀಕ್ಷೆಗಳನ್ನು ಎದುರಿಸುತ್ತಿದ್ದರು.  ಈಗ ವೈದ್ಯಕೀಯ ಹಾಗೂ ಇಂಜಿನಿಯರ್ ಗಳೂ ಐಎಎಸ್ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 
ಯುಪಿಎಸ್ ಸಿ ಪರೀಕ್ಷೆಯ ಆಕಾಂಕ್ಷಿಗಳು ಆಲ್ ರೌಂಡರ್ ಗಳಾಗಿರಬೇಕು ಎಂದಿರುವ ಬಿಪ್ಲವ್ ದೇವ್, ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಕಪಿಲ್ ದೇವ್ ಅವರ ಉದಾಹರಣೆ ನೀಡಿದ್ದು, ಕಪಿಲ್ ದೇವ್ ಅವರ ಬೌಲಿಂಗ್ ಚೆನ್ನಾಗಿತ್ತು. ಹಾಗೆಯೇ ಬ್ಯಾಟಿಂಗ್ ಸಹ ಉತ್ತಮವಾಗಿತ್ತು. ಈಗಿನ ಕಾಲ ವಿಶೇಷತೆಗೆ ಹೆಚ್ಚು ಬೆಲೆ ಕೊಡುತ್ತದೆ. ಆಲ್ ರೌಂಡರ್ ಗಳಿಗೆ ಯಾವತ್ತಿದ್ದರೂ ಹೆಚ್ಚಿನ ಆದ್ಯತೆ ಎಂದು ಬೇವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com