ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆ ಮೇಲೆ 'ಎಸ್​ಸಿ, ಎಸ್​ಟಿ' ಜಾತಿ ಗುರುತು: ತೀವ್ರ ವಿರೋಧ, ತನಿಖೆಗೆ ಆದೇಶ

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್​ಸಿ, ಎಸ್​ಟಿ ಜಾತಿ ಗುರುತು ಹಾಕಲಾಗಿದ್ದು...
ಪೊಲೀಸ್ ಆಕಾಂಕ್ಷಿಗಳು
ಪೊಲೀಸ್ ಆಕಾಂಕ್ಷಿಗಳು
ಭೋಪಾಲ್: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಹಿನ್ನೆಲೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಎಸ್​ಸಿ, ಎಸ್​ಟಿ ಜಾತಿ ಗುರುತು ಹಾಕಲಾಗಿದ್ದು ಈ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು ಈ ವೇಳೆ ಹಾಜರಾಗಿದ್ದ ಆಕಾಂಕ್ಷಿಗಳ ಎದೆಯ ಮೇಲೆ ಆತನ ಜಾತಿ(ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ)ಯನ್ನು ಗುರುತು ಹಾಕಲಾಗಿದೆ. ಈ ಕುರಿತ ಚಿತ್ರಗಳು ಹಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಈ ಘಟನೆ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಕರಣ ಸಂಬಂಧ ಧಾರ್ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಸಿಂಗ್ ಅವರು ತನಿಖೆಗೆ ಆದೇಶಿಸಿದ್ದಾರೆ. 
ನಿನ್ನೆ ಜಿಲ್ಲಾ ವೈದ್ಯಕೀಯ ಮಂಡಳಿ ಪೊಲೀಸ್ ಹುದ್ದೆ ಆಕಾಂಕ್ಷಿಗಳ ವೈದ್ಯಕೀಯ ಪರೀಕ್ಷೆಯನ್ನು  ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com