ಬೌದ್ಧ ಧರ್ಮಕ್ಕೆ ದಲಿತರ ಮತಾಂತರ ಅಪಾಯಕಾರಿ: ಬಿಜೆಪಿ ಶಾಸಕ

ದಲಿತರು ಬೌದ್ಧ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಳ್ಳುತ್ತಿರುವುದರಿಂದ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಶಾಸಕ ಉದಿತ್ ರಾಜ್...
ಉದಿತ್ ರಾಜ್
ಉದಿತ್ ರಾಜ್
Updated on
ಉನಾ: ದಲಿತರು ಬೌದ್ಧ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಳ್ಳುತ್ತಿರುವುದರಿಂದ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ ಎಂದು  ಬಿಜೆಪಿ ಶಾಸಕ ಉದಿತ್ ರಾಜ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ದಲಿತರ ಮತಾಂತರದಿಂದ ಸಾಮಾಜಿಕ ಅನ್ಯಾಯ ತಲೆದೋರುತ್ತಿದೆ,  ಹಲವು ಸಂಖ್ಯೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಅವರು ಬೌದ್ಧ ದರ್ಮ ಸೇರುವುದಕ್ಕೆ ಪ್ರೇರಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ,
ಇದಕ್ಕೆಲ್ಲಾ ಕಾರಣ ಸಾಮಾಜಿಕ ಅನ್ಯಾಯ, ದಲಿತನೊಬ್ಬ ಮೀಸೆ ಬಿಟ್ಟರೂ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಅವರಿಗೆ ಏನು ಸಿಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ,  ಇದು ನಿಜಕ್ಕೂ ಅಪಾಯಕಾರಿ ಸ್ಥಿತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮನ್ನು ಹಿಂದೂ ಎಂದು ಪರಿಗಣಿಸದೇ ಇರುವ ಕಾರಣಕ್ಕೆ ಬೌದ್ಧ ಮತಕ್ಕೆ ಮತಾಂತರಗೊಳ್ಳುತ್ತಿರುವುದಾಗಿ  ಗುಜರಾತ್ನ ಉನಾದಲ್ಲಿರುವ ದಲಿತರ ಗುಂಪೊಂದು ಹೇಳಿದೆ. 
ಇದೇ ರೀತಿಯ ಪರಿಸ್ಥಿತಿ ಕರ್ನಾಟಕದಲ್ಲೂ ನಡೆದಿತ್ತು, ಮಾರ್ಚ್ 1 ರಂದು ಕರ್ನಾಟಕದ  ಕಲಬುರಗಿ ಯಲ್ಲಿ 60 ಕುಟುಂಬಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com