
ನವದೆಹಲಿ: ಮುಂದಿನ ಪ್ರವಾಸಿ ಭಾರತೀಯ ದಿನವನ್ನು ಧಾರ್ಮಿಕ ನಗರಿ ವಾರಣಾಸಿಯಲ್ಲಿ ಮುಂದಿನ ಜನವರಿಯಲ್ಲಿ ಆಯೋಜಿಸಲಾಗುವುದು, ಇಲ್ಲಿ ಭಾರತೀಯ ವಲಸಿಗರಿಗೆ ಕುಂಭ ಸ್ನಾನದಲ್ಲಿ ಭಾಗವಹಿಸುವ ಅವಕಾಶ ನೀಡಿ ನಂತರ ದೆಹಲಿಯಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜಿನಿಯಾ ಸುತ್ತಮುತ್ತ ಭಾರತೀಯ ಅಮೆರಿಕಾ ಸಮುದಾಯದ ನಾಯಕರನ್ನುದ್ದೇಶಿಸಿ ಮಾತನಾಡಿದ ಭಾರತೀಯ ರಾಯಭಾರಿಗಳ ಸಮುದಾಯ ವ್ಯವಹಾರಗಳ ಸಚಿವ ಅನುರಾಗ್ ಕುಮಾರ್ ಭಾರತೀಯ ವಲಸಿಗರು ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಪ್ರವಾಸಿ ಭಾರತೀಯ ದಿವಸವನ್ನು ವಾರಣಾಸಿಯಲ್ಲಿ ಜನವರಿ 21ರಿಂದ 23ರವರಂಗೆಆಯೋಜಿಸಲಾಗುವುದು. ಇಲ್ಲಿಗೆ ಬಂದವರಿಗೆ ಅಲಹಾಬಾದಿನ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಮತ್ತು ಅಲ್ಲಿಂದ ದೆಹಲಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕುಮಾರ್ ತಿಳಿಸಿದರು.
ಈ ವರ್ಷದ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌಥ್ ಉದ್ಘಾಟಿಸಲಿದ್ದಾರೆ.
Advertisement