ರಜನೀಕಾಂತ್
ದೇಶ
ಕಾವೇರಿ ಆಸ್ಪತ್ರೆಗೆ ನಟ ರಜನಿಕಾಂತ್ ಭೇಟಿ: ಕರುಣಾನಿಧಿ ಆರೋಗ್ಯ ವಿಚಾರಣೆ
ನಟ- ರಾಜಕಾರಣಿ ರಜನೀಕಾಂತ್ ಮಂಗಳವಾರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಕರಣಾನಿಧಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ...
ಚೆನ್ನೈ: ನಟ- ರಾಜಕಾರಣಿ ರಜನೀಕಾಂತ್ ಮಂಗಳವಾರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಕರಣಾನಿಧಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ದೇಶದ ಅತಿ ಹಿರಿಯ ರಾಜಕಾರಣಿ ಕರುಣಾ ನಿಧಿ, ಅವರು ಮಲಗಿದ್ದಾರೆ, ಹೀಗಾಗಿ ಅವರ ಕುಟುಂಬ ಸದಸ್ಯರಿಂದ ನಾನು ಅವರ ಆರೋಗ್ಯ ಸ್ಥಿತಿ ಬಗ್ಗೆ ತಿಳಿದುಕೊಂಡಿದ್ದೇನೆ, ಶೀಘ್ರವಾಗಿ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಜನೀಕಾಂತ್ ಮಾಧ್ಯಮದವರೊಂದಿಗೆ ಹೇಳಿದರು.
ಆಸ್ಪತ್ರೆಯಲ್ಲಿ ಡಿಎಂಕೆ ಮುಖಂಡ ಎಂಕೆ ಆಳಗಿರಿ ಅವರನ್ನು ರಜನಿಕಾಂತ್ ಭೇಟಿ ಮಾಡಿದರು,. ಮಂಗಳವಾರ ಬೆಳಗ್ಗೆ ಕರುಣಾನಿಧಿ ಅವರ ಆರೋಗ್ಯ ಸುಧಾರಿಸಿದೆ ಎಂದು ಕಾವೇರಿ ಆಸ್ಪತ್ರೆ ಹೇಳಿತ್ತು. ನಂತರವೂ ಅವರನ್ನು ಅಬ್ಸರ್ವೇಶನ್ ನಲ್ಲಿ ಇಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ