ಟ್ರಾಯ್ ಮುಖ್ಯಸ್ಥರ ಪ್ರಹಸನ: ಆಧಾರ್ ಸಂಖ್ಯೆ ಹಂಚಿಕೊಳ್ಳದಂತೆ ಯುಐಡಿಎಐ ಎಚ್ಚರಿಕೆ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಅವರ ಆಧಾರ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಅವರ ಆಧಾರ್ ಸವಾಲಿನ ನಂತರ ಎಚ್ಚೆತ್ತುಕೊಂಡ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ), ಸಾರ್ವಜನಿಕವಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ ಎಂದು ಮಂಗಳವಾರ ಜನತೆಗೆ ಮನವಿ ಮಾಡಿದೆ.
ಇಂಟರ್ ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇತರರಿಗೆ ಸವಾಲು ನೀಡುವ ಭರದಲ್ಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ಅನ್ನು ಹಚ್ಚಿಕೊಳ್ಳಬೇಡಿ ಎಂದು ಯುಐಡಿಎಐ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಧಾರ್ ನಂಬರ್ ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಚಟುವಟಿಕೆ ಕಾನೂನಿಗೆ ವಿರುದ್ಧವಾಗಿದೆ ಎಂದು ಯುಐಡಿಎಐ ಹೇಳಿದೆ. ಅಲ್ಲದೆ ಇತರೆ ಯಾವುದೇ ಉದ್ದೇಶಕ್ಕೆ ಮತ್ತೊಬ್ಬರ ಆಧಾರ್ ನಂಬರ್ ಬಳಸಿದರೆ ಆಧಾರ್ ಕಾಯ್ದೆ ಅಡಿ ಅಪರಾಧವಾಗುತ್ತದೆ ಮತ್ತು ಜೈಲು ಶಿಕ್ಷೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಳೆದ ಶನಿವಾರ ಟ್ರಾಯ್ ಅಧ್ಯಕ್ಷ ಶರ್ಮಾ ಅವರು ಟ್ವಿಟರ್ ನಲ್ಲಿ ತಮ್ಮ ಆಧಾರ್ ನಂಬರ್ ಪ್ರಕಟಿಸಿ, ಅದನ್ನು ಬಳಸಿ ನನಗೆ ಹಾನಿ ಉಂಟು ಮಾಡುತ್ತಾರೋ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದರು. 
ಶರ್ಮಾ ಸವಾಲು ಸ್ವೀಕರಿಸಿದ್ದ ಫ್ರಾನ್ಸ್ ಮೂಲದ ಹ್ಯಾಕರ್‌ ಎಲಿಯಟ್ ಅಲ್ಡರ್ ಸನ್‌ ಟ್ವಿಟರ್ ನಲ್ಲಿ, ಟ್ರಾಯ್ ಮುಖ್ಯಸ್ಥರ ಮೊಬೈಲ್ ನಂಬರ್, ಪಾನ್ ಸಂಖ್ಯೆ ಸೇರಿ ಹಲವು ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಟ್ವೀಟಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸವಾಲ್ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com