ಸಂವಿಧಾನದ ಕಲಂ 35ಎ ತೆಗೆದುಹಾಕಬೇಕು: ಸುಬ್ರಹ್ಮಣ್ಯ ಸ್ವಾಮಿ ಒತ್ತಾಯ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ಕಲಂ 370 ಹಾಗೂ 35 (ಎ) ನ್ನು ಸಂಸತ್ತಿನಲ್ಲಿ ಯಾವುದೇ ಮತದಾನ ನಡೆಸದ ಸರ್ವಾನುಮತದಿಂದ ತೆಗೆದುಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಒತ್ತಾಯಿಸಿದ್ದಾರೆ.
ಸುಬ್ರಹ್ಮಣ್ಯ ಸ್ವಾಮಿ
ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ  ಸಂವಿಧಾನದ  ಕಲಂ 370 ಹಾಗೂ 35 (ಎ) ನ್ನು  ಸಂಸತ್ತಿನಲ್ಲಿ ಯಾವುದೇ  ಮತದಾನ ನಡೆಸದ ಸರ್ವಾನುಮತದಿಂದ   ತೆಗೆದುಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಒತ್ತಾಯಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆಯುವ  ಸಾಹಸಕ್ಕೆ ಮುಂದಾದ್ದರೆ ಅದರಲ್ಲಿ ಸಫಲವಾಗುವುದಿಲ್ಲ ಎಂದು ನ್ಯಾಷನಲ್  ಕಾನ್ಪರೆನ್ಸ್ ಮುಖಂಡ  ಪಾರೂಖ್ ಅಬ್ದುಲ್ಲಾ ಹೇಳಿಕೆ ನೀಡಿದ್ದ ಬೆನ್ನಲ್ಲೇ  ಸ್ವಾಮಿ ಈ  ರೀತಿಯ ಹೇಳಿಕೆ ನೀಡಿದ್ದಾರೆ.

ಇದು ತಾತ್ಕಾಲಿಕ ಕಾನೂನು ಆಗಿದ್ದು, ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ.  ಪಾರೂಖ್ ಅಬ್ದುಲ್ ಹೇಳುವಂತೆ ಅದು ತಾತ್ಕಾಲಿಕ ವಿನಾಯಿತಿ ಆಗಿದ್ದರೆ ಸಂಸತ್ತಿನಲ್ಲಿ ಯಾವುದೇ ಮತದಾನ ಇಲ್ಲದೆ ತೆಗೆದುಹಾಕಬೇಕು. ಅದನ್ನು ತೆಗೆದ ನಂತರ ತಪ್ಪು ತಿಳುವಳಿಕೆ ಎಂಬುದು ಅರ್ಥವಾಗಲಿದೆ. ಆಗ ಅವರು ಏನು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಿಂದಲೂ ಬೆಂಬಲ ಪಡೆಯಲು ಆಗುವುದಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.

ಮತ್ತೊಂದೆಡೆ ಸಿಪಿಐ ಮುಖಂಡ ಡಿ. ರಾಜಾ, ಕಲಂ 35( ಎ) ತಿರುಚುವ ಕೆಲಸಕ್ಕೆ ಮುಂದಾಗಬಾರದು, ಪಾರೂಖ್ ಅಬ್ದುಲ್ ಹಿರಿಯ ಮುಖಂಡರಾಗಿದ್ದು,  ಜಮ್ಮು ಕಾಶ್ಮೀರದ ಬಗ್ಗೆ ಚೆನ್ನಾಗಿ ಅರಿವಿದೆ.  ಆಗಿದ್ದರೂ ಕಲಂ 370 ಕ್ಕೆ ಯಾವುದ್ದೆ ಧಕ್ಕೆ ಯಾಗಬಾರದು ಎಂದು ಹೇಳಿದ್ದಾರೆ.

ಈ ಮಧ್ಯೆ ಆರ್ ಜೆಡಿ ಮುಖಂಡ ಮನೋಜಾ ಜಾ , ಈ ವಿಚಾರವನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ಕಲಂ 35 ತಿರುಚುವ ಪ್ರಯತ್ನವನ್ನು ನ್ಯಾಷನಲ್ ಕಾನ್ಪರೆನ್ಸ್ ವಿರೋಧಿಸುತ್ತದೆ ಎಂದು ಪಾರೂಖ್ ಅಬ್ದುಲ್ಲಾ ನಿನ್ನೆ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಕಲಂ ಸಂಬಂಧ  ಇಂದು ಕಾಶ್ಮೀರದ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಸಂವಿಧಾನದ ಕಲಂ 370  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದರೆ, ಕಲಂ 35 ಎ ಜಮ್ಮು-ಕಾಶ್ಮೀರ ಜನತೆ ಆಸ್ತಿಕೊಳ್ಳಲು, ಮಾರಾಟ ಮಾಡಲು , ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com