ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!

ರೈಲ್ವೆ ಸ್ಟೇಷನ್ ಕೊಳಕಾಗಿರುವುದು ಗಮನಿಸಿದರೆ ಇನ್ನು ಮುಂದೆ ಪ್ರಯಾಣಿಕರು ವಾಟ್ಸ್ ಆಪ್ ಮೂಲಕ ಆ ಫೋಟೋವನ್ನು ವೆಸ್ಟ್ರನ್ ರೈಲ್ವೆಗೆ ಕಳಿಸಿ, ತಕ್ಷಣವೇ ಸ್ವಚ್ಛಗೊಳಿಸಲು ರೈಲ್ವೆ ಅಧಿಕಾರಿಗಳ ಗಮನಕ್ಕೆ
ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!
ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!
ಮುಂಬೈ:  ರೈಲ್ವೆ ಸ್ಟೇಷನ್ ಕೊಳಕಾಗಿರುವುದು ಗಮನಿಸಿದರೆ ಇನ್ನು ಮುಂದೆ ಪ್ರಯಾಣಿಕರು ವಾಟ್ಸ್ ಆಪ್ ಮೂಲಕ ಆ ಫೋಟೋವನ್ನು ವೆಸ್ಟ್ರನ್ ರೈಲ್ವೆಗೆ ಕಳಿಸಿ, ತಕ್ಷಣವೇ ಸ್ವಚ್ಛಗೊಳಿಸಲು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. 
ವೆಸ್ಟ್ರನ್ ರೈಲ್ವೆ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಭಾಗವಾಗಿ ಪ್ರಯಾಣಿಕರೇ ರೈಲ್ವೆ ಸ್ವಚ್ಛತೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾದ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಮುಂಬೈ ನಗರದಲ್ಲಿ ಈ ಸೌಲಭ್ಯ ಜಾರಿಯಲ್ಲಿದ್ದು, ಈ ರೀತಿಯ ವಾಟ್ಸ್ ಆಪ್ ಮೆಸೇಜ್ ಗಳನ್ನು ಗಮನಿಸುವುದಕ್ಕಾಗಿಯೇ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರು 9004499733 ನಂಬರ್ ಗೆ ವಾಟ್ಸ್ ಆಪ್ ಸಂದೇಶ ರವಾನೆ ಮಾಡಬಹುದಾಗಿದೆ. 
ವಾಟ್ಸ್ ಆಪ್ ಅಭಿಯಾನದ ಮೂಲಕ ರೈಲ್ವೆ ನಿಲ್ದಾಣಗಳನ್ನು ಮತ್ತಷ್ಟು ಸ್ವಚ್ಛವಾಗಿರಿಸಲು ಸಾಧ್ಯವಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ರನ್ ರೈಲ್ವೆಯ 5 ವಿಭಾಗಗಳಾದ ವಡೋದರಾ( 9724091426) ಅಹ್ಮದಾಬಾದ್(9724093981) ಭವ್ ನಗರ್ (9724097967) ರಾಜ್ ಕೋಟ್ (9724094983) ರತ್ಲಂ (9752492970) ನಂಬರ್ ಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com