ದೇಶಾದ್ಯಂತ ಎನ್ಆರ್ ಸಿ ಹಾಗೆ ಸಮೀಕ್ಷೆ ಮಾಡಿ: ಕೇಂದ್ರಕ್ಕೆ ಬಿಜೆಪಿ ನಾಯಕರ ಒತ್ತಾಯ

ಇತ್ತೀಚಿಗಷ್ಟೇ ಅಸ್ಸಾಂನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ಕರಡು ತೀವ್ರ ಟೀಕೆಗೆ ಗುರಿಯಾಗಿದ್ದು....
ಮನೋಜ್ ತಿವಾರಿ
ಮನೋಜ್ ತಿವಾರಿ
Updated on: 
ನವದೆಹಲಿ: ಇತ್ತೀಚಿಗಷ್ಟೇ ಅಸ್ಸಾಂನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ಕರಡು ತೀವ್ರ ಟೀಕೆಗೆ ಗುರಿಯಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿ ನಾಯಕ ಮನೋಜ್ ತಿವಾರಿ ಅವರು ದೇಶಾದ್ಯಂತ ಎನ್ ಆರ್ ಸಿ ಹಾಗೆಯೇ ಸಮೀಕ್ಷೆ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು, ದೇಶದಲ್ಲಿ ರೋಹಿಂಗ್ಯಾಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ದೆಹಲಿ ಸೇರಿದಂತೆ ದೇಶಾದ್ಯಂತ ಎನ್ ಆರ್ ಸಿ ಹಾಗೆಯೇ ಸಮೀಕ್ಷೆ ನಡೆಸಿ ಎಂದು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ರೋಹಿಂಗ್ಯಾಗಳು ಮತ್ತು ವಿದೇಶಿ ಅಕ್ರಮ ವಲೆಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸುತ್ತಿದ್ದು, ಹಲವರು ಆಧಾರ್ ಮತ್ತು ರೇಷನ್ ಕಾರ್ಡುಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದು ತಿವಾರಿ ಪತ್ರದಲ್ಲಿ ವಿವರಿಸಿದ್ದಾರೆ. 
ದೆಹಲಿಯ ವಿವಿಧ ಭಾಗಗಳಲ್ಲಿರುವ ರೋಹಿಂಗ್ಯಾಗಳನ್ನು ಮತ್ತು ಬಾಂಗ್ಲಾದೇಶದ ಅಕ್ರಮ ವಾಸಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿವಾರಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಇನ್ನು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಜ್ ಪುರೋಹಿತ್ ಅವರು ಸಹ ಅಸ್ಸಾಂನಲ್ಲಿ ಜಾರಿಗೆ ತಂದ ಎನ್ಆರ್ ಸಿಯನ್ನು ಮುಂಬೈ ಸೇರಿದಂತೆ ದೇಶಾದ್ಯಂತ ಜಾರಿಗೆ ತರಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com