ಸಾಮಾಜಿಕ ಜಾಲತಾಣ ಕೇಂದ್ರ ಅಧಿಸೂಚನೆ ಹಿಂದಕ್ಕೆ : ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

ಸಾಮಾಜಿಕ ಜಾಲತಾಣ ಚಟುವಟಿಕೆ ನಿರ್ವಹಿಸುವ ಉಪಕರಣವಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಕೇಂದ್ರ ಸಂಬಂಧ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.
ಸಾಂದರ್ಭಿಕ
ಸಾಂದರ್ಭಿಕ
ನವದೆಹಲಿ: ಸಾಮಾಜಿಕ ಜಾಲತಾಣ ಕೇಂದ್ರ  ಸ್ಥಾಪನೆ ವಿಚಾರದಲ್ಲಿ ಕೇಂದ್ರಸರ್ಕಾರ ಉಲ್ಟಾ ಹೊಡೆದಿದೆ.
ಸಾಮಾಜಿಕ  ಜಾಲತಾಣ ಚಟುವಟಿಕೆ ನಿರ್ವಹಿಸುವ ಉಪಕರಣವಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ  ಸಾಮಾಜಿಕ  ಜಾಲತಾಣ  ಕೇಂದ್ರ  ಸಂಬಂಧ ಹೊರಡಿಸಲಾಗಿದ್ದ  ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಕೇಂದ್ರಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಇಂದು ಹೇಳಿಕೆ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ  ನೇತೃತ್ವದ ಪೀಠದ ಎದುರು ಕೇಂದ್ರ ಸರ್ಕಾರದ   ಪರ  ಇಂದು ಹಾಜರಾದ ಅಟಾರ್ನಿ ಜನರಲ್  ಕೆ. ಕೆ. ವೇಣುಗೋಪಾಲ್,   ಅಧಿಸೂಚನೆ ಹಿಂದಕ್ಕೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com