ಟಿಕೆಟ್ ರಹಿತ ರೈಲು ಪ್ರಯಾಣಕ್ಕಾಗಿ ದಂಡ ಕಟ್ಟಲು ಹಣವಿಲ್ಲದೇ ಹರಾಜಾದಳು ಆಕೆ !

ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ಸಿಕ್ಕಿಬಿದ್ದಿದ್ದರಿಂದ ದಂಡ ಪಾವತಿಸಲು ದುಡ್ಡಿಲ್ಲದ ಕಾರಣಕ್ಕೆ ಆಕೆಯನ್ನು ರೈಲ್ವೆ ಅಧಿಕಾರಿಗಳು ಹರಾಜು ಹಾಕಿ ದಂಡ ವಸೂಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬಯಿ:  ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ಸಿಕ್ಕಿಬಿದ್ದಿದ್ದರಿಂದ ದಂಡ ಪಾವತಿಸಲು ದುಡ್ಡಿಲ್ಲದ ಕಾರಣಕ್ಕೆ ಆಕೆಯನ್ನು ರೈಲ್ವೆ ಅಧಿಕಾರಿಗಳು ಹರಾಜು ಹಾಕಿ ದಂಡ ವಸೂಲಿ ಮಾಡಿದ ಘಟನೆ ವರದಿಯಾಗಿದೆ.
ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದು ಒಂದು ಆಡು, ಆಡಿನ ಜೊತೆ ಒಬ್ಬ ವ್ಯಕ್ತಿಯಿದ್ದ ಆದರೆ, ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಬಂದ ನಂತರ ಟಿಕೆಟ್ ಇಲ್ಲದ ಕಾರಣ ಆತ ಅಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋದ. ರೈಲ್ವೆ ನಿಯಮಗಳ ಪ್ರಕಾರ ಬಸಂತಿಯನ್ನು  ರೈಲಿನಲ್ಲಿ ಒಯ್ಯುವಂತಿಲ್ಲ. . 
ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ವಿಧಿಸುವ ದಂಡದ ಹಣವನ್ನು ವಸೂಲಿ ಮಾಡಲೇಬೇಕಾದ ಪ್ರಮೇಯ ಈಗ ರೈಲ್ವೇ ಅಧಿಕಾರಿಗಳಿಗೆ  ಸಂಕಷ್ಟವನ್ನು ತಂದೊಡ್ಡಿತ್ತು. ಕೊನೆಗೆ ಅವರು "ಬಸಂತಿ'ಯನ್ನು  2,500 ರೂ.ಗಳಿಗೆ ಹರಾಜು ಹಾಕಿ ದಂಡದ ಹಣವನ್ನು ವಸೂಲಿ ಮಾಡಿದರು. ಮುಂಬಯಿಯ ಲೋಕಲ್‌ ರೈಲ್ವೆಯ ಮಸ್ಜಿದ್‌ ಸ್ಟೇಶನ್‌ನಲ್ಲಿ "ಬಸಂತಿ ಹರಾಜು ಪ್ರಸಂಗ' ನಡೆಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com