ಸಾಂದರ್ಭಿಕ ಚಿತ್ರ
ದೇಶ
ಪೋನ್ ನಲ್ಲಿ ಏಕಾಏಕಿ ಆಧಾರ್ ಸಹಾಯವಾಣಿ ಸಂಖ್ಯೆ : ಬಳಕೆದಾರರಲ್ಲಿ ಗೊಂದಲ
ವಿಶಿಷ್ಠ ಗುರುತು ಪ್ರಾಧಿಕಾರದ ಟ್ರೋಲ್ ಪ್ರೀ ಸಹಾಯವಾಣಿ ಸಂಖ್ಯೆಯನ್ನು ಬಳಕೆದಾರ ಗಮನಕ್ಕೆ ತರದೇ ಪೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.
ನವದೆಹಲಿ : ವಿಶಿಷ್ಠ ಗುರುತು ಪ್ರಾಧಿಕಾರದ ಟ್ರೋಲ್ ಪ್ರೀ ಸಹಾಯವಾಣಿ ಸಂಖ್ಯೆಯನ್ನು ಬಳಕೆದಾರ ಗಮನಕ್ಕೆ ತರದೇ ಪೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.
ಆದಾಗ್ಯೂ, ಈ ವಿಚಾರದ ಬಗ್ಗೆ ಯುಐಡಿಎಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆ ಇದ್ದ 1800-300 ಸಹಾಯವಾಣಿ ಸಂಖ್ಯೆ ಜೊತೆಗೆ 1947 ಹೊಸ ನಂಬರ್ ಪೋನ್ ಬುಕ್ಸ್ ನಲ್ಲಿ ಕಾಣಿಸಿಕೊಂಡಿದೆ.
ಇದು ಜೋಕ್ಸ್ ಅಲ್ಲ. ನನ್ನ ಪೋನ್ ನಲ್ಲೂ ಕೂಡಾ ಇದು ಇದೆ. ಈ ನಂಬರ್ ನ್ನು ನಾನು ಸೇವ್ ಮಾಡಿಕೊಂಡಿಲ್ಲ. ನಿಮ್ಮ ಪೋನ್ ಆಪ್ ಚೆಕ್ ಮಾಡಿಕೊಳ್ಳಿ ಎಂಬ ಸಂದೇಶಗಳನ್ನು ಸ್ಕ್ರೀನ್ ಹಾಟ್ ನಲ್ಲಿ ಟ್ವಿಟ್ ಬಳಕೆದಾರರು ಹಾಕುತ್ತಿದ್ದಾರೆ.
ಆಧಾರ್ ಕಾರ್ಡ್ ಇರುವ, ಇಲ್ಲದಿರುವ ಅಥವಾ ಆಧಾರ್ ಆಪ್ ಜೋಡಣೆ ಮಾಡಿರುವ, ಮಾಡದಿರುವ ಎಲ್ಲಾ ಪೋನ್ ಗಳಲ್ಲಿ ಸಹಾಯವಾಣಿ ನಂಬರ್ ಬರುತ್ತಿದೆ. ಬಳಕೆದಾರರ ಗಮನಕ್ಕೆ ತರದೇ ಸಂಪರ್ಕಿತರ ಪಟ್ಟಿಯಲ್ಲಿ ಸೇರಿಸಲಾಗಿದೆ ಏಕೆ ಎಂಬುದರ ಬಗ್ಗೆ ವಿವರಣೆ ನೀಡಿ ಎಂದು ಫ್ರೆಂಚ್ ಭದ್ರತಾ ತಜ್ಞ ಎಲ್ಲಿಯಟ್ ಅಲ್ಡರ್ ಸನ್ ಟ್ವೀಟರ್ ಮೂಲಕ ಯುಐಡಿಎಐ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ