ನವದೆಹಲಿ: ರಸ್ತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಗ್ರಾಮೀಣ, ನಗರ ಮನೆ, ರೈಲ್ವೆ, ವಿಮಾನ ಮತ್ತು ಬಂದರುಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಇಂದು ಪರಿಶೀಲನೆ ನಡೆಸಿದರು.
ಮೂಲಸೌಕರ್ಯ ಸಂಬಂಧಿತ ಸಚಿವಾಲಯ ಹಾಗೂ ನೀತಿ ಆಯೋಗ, ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
2013-14ರ ಆರ್ಥಿಕ ವರ್ಷದಲ್ಲಿ ಪ್ರತಿದಿನ 11. 67 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗುತಿತ್ತು. 2017-18ರ ಆರ್ಥಿಕ ವರ್ಷದಲ್ಲಿ 26.93 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ನೀತಿ ಆಯೋಗ ಸಿಇಒ ಅಮಿತಾಬ್ ಕಾಂತ್ ವಿವರಿಸಿದರು.
Advertisement