ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದ: ಸೆಬಿ ಹಾಗೂ ಆಂಟಿಗುವಾ ನಡುವೆ ಜಟಾಪಟಿ!

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದ ಚರ್ಚೆಗೆ ಗ್ರಾಸವಾಗಿದ್ದು
ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದ: ಸೆಬಿ ಹಾಗೂ ಆಂಟಿಗುವಾ ನಡುವೆ ಜಟಾಪಟಿ!
ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದ: ಸೆಬಿ ಹಾಗೂ ಆಂಟಿಗುವಾ ನಡುವೆ ಜಟಾಪಟಿ!
ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದ ಚರ್ಚೆಗೆ ಗ್ರಾಸವಾಗಿದ್ದು, ಪೌರತ್ವ ಮನವಿಗೆ ಒಪ್ಪಿಗೆ ನೀಡಿರಲಿಲ್ಲ ಎಂದು ಸೆಬಿ ಹೇಳುತ್ತಿದೆ. ಆದರೆ ಭಾರತದಿಂದ ಎನ್ಒಸಿ ಲಭಿಸಿದ ನಂತರವೇ ಪೌರತ್ವವನ್ನು ಅಂತಿಮಗೊಳಿಸಲಾಗಿದೆ ಎಂದು ಸೆಬಿ ಹೇಳಿದೆ. 
ಉದ್ಯಮಿ ಮೆಹುಲ್ ಚೋಕ್ಸಿಯ ಆಂಟಿಗುವಾ ಪೌರತ್ವಕ್ಕೆ ಸಂಬಂಧಿಸಿದಂತೆ ಸಿಟಿಜಶಿಪ್ ಬೈ ಇನ್ವೆಸ್ಟ್ಮೆಂಟ್ ಯುನಿಟ್ ನಿಂದ  ನಮಗೆ ಯಾವುದೇ ಮನವಿಯೂ ಬಂದಿರಲಿಲ್ಲ, ನಾವು ಯಾವುದೇ ಪ್ರತಿಕ್ರಿಯೆಯನ್ನೂ ಸಿಐಯುಗೆ ನೀಡಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ. ಆದರೆ ಆಂಟಿಗುವಾ ಅಧಿಕಾರಿಗಳು ಮಾತ್ರ ಭಾರತದಿಂದ ನಿರಾಪೇಕ್ಷಣ ಪತ್ರ ಬಂದ ನಂತರವೇ ಚೋಕ್ಸಿಗೆ ಪೌರತ್ವ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ.
ವಿದೇಶಾಂಗ ಇಲಾಖೆ ಸಿಐಯುಗೆ ಚೋಕ್ಸಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾದ ಅಂಶಗಳನ್ನು ನೀಡಿದ ಬಳಿಕವಷ್ಟೇ ಆಂಟಿಗುವಾ ಅಧಿಕಾರಿಗಳು ಪೌರತ್ವವನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಈ ಅಂಶ ಈಗ ವಿವಾದಕ್ಕೆ ಕಾರಣವಾಗಿದ್ದು ಸೆಬಿ ಹಾಗೂ ಆಂಟಿಗುವಾ ನಡುವೆ ಜಟಾಪಟಿ ಪ್ರಾರಾಂಭವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com