ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ, ರಾಜಸ್ಥಾನದ ಜನತೆಗಾಗಿ 100 ಕ್ಕೂ ಹೆಚ್ಚು ಯೋಜನೆಗಳನ್ನು ಬಿಜೆಪಿ ಸರ್ಕಾರ ನೀಡಿದೆ. ರಾಹುಲ್ ಬಾಬಾ ನಿಮಗೆ ಎಣಿಸಲು ಬರುವುದಿದ್ದರೆ ಎಣಿಸಿ, ನನಗೆ ಇಟಾಲಿ ಭಾಷೆ ಬರುವುದಿಲ್ಲ, ಇಲ್ಲದೇ ಇದ್ದಿದ್ದರೆ ನಾವು ಆ ಭಾಷೆಯಲ್ಲೇ ಬಿಜೆಪಿ ಸಾಧನೆಗಳನ್ನು ಹೇಳುತ್ತಿದ್ದೆ ಎಂದು ರಾಹುಲ್ ಗಾಂಧಿಯನ್ನು ಅಮಿತ್ ಶಾ ಲೇವಡಿ ಮಾಡಿದ್ದಾರೆ.