ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ವಿದೇಶ ಪ್ರವಾಸಕ್ಕೆ ನ್ಯಾಯಾಲಯ ಅನುಮತಿ ಅಗತ್ಯ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗ ನ್ಯಾಯಾಲಯದ ಅನುಮತಿ ಅಗತ್ಯ ಎಂದು ಜೋದ್ ಪುರ್ ಸೆಶನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ರಾಜಸ್ತಾನ :  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿ ಬಾರಿ  ವಿದೇಶ ಪ್ರವಾಸ ಕೈಗೊಂಡಾಗ  ನ್ಯಾಯಾಲಯದ ಅನುಮತಿ ಅಗತ್ಯ ಎಂದು ಜೋದ್ ಪುರ್  ಸೆಶನ್ಸ್  ನ್ಯಾಯಾಲಯ ಇಂದು ಆದೇಶ ನೀಡಿದೆ.

ಕೃಷ್ಣಮೃಗ  ಬೇಟೆ  ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.  ಸಲ್ಮಾನ್ ಖಾನ್ ವಿದೇಶ ಪ್ರವಾಸಕ್ಕಾಗಿ ಅನುಮತಿ ವಿನಾಯಿತಿ ಕೋರಿ 52 ವರ್ಷದ ಹಿರಿಯ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಾಲಯ ಈ ತೀರ್ಪು ಪ್ರಕಟಿಸಿದರು.

ಅಗಸ್ಟ್ 10 ರಿಂದ 26 ರವರೆಗೂ ಚಿತ್ರೀಕರಣಕ್ಕಾಗಿ  ಅಬುದಾಬಿ, ಮಲ್ಟಾ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ಕೋರುವಂತೆ  ಸಲ್ಮಾನ್ ಖಾನ್ ಸಲ್ಲಿಸಿರುವ ಮತ್ತೊಂದು ಅರ್ಜಿ  ನ್ಯಾಯಾಲಯದಲ್ಲಿ ವಿಚಾರಣೆಯಾಗದೆ  ಇನ್ನೂ   ಹಾಗೆಯೇ ಉಳಿದಿದೆ.
 
1998ರಲ್ಲಿ ಹಮ್ ಸಾಥ್ ಸಾಥ್ ಹೈನ್  ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಎರಡು ಕೃಷ್ಣಮೃಗ ಹತ್ಯೆಯಲ್ಲಿ ಸಲ್ಮಾನ್ ಖಾನ್ ತಪಿತಸ್ಥ ಎಂದು  ಪರಿಗಣಿಸಿ ಐದು ವರ್ಷಗಳ ಕಾಲ ಶಿಕ್ಷೆಯನ್ನು   ಏಪ್ರಿಲ್ 5. 2018ರಂದು  ನ್ಯಾಯಾಲಯದಿಂದ  ಘೋಷಿಸಲಾಗಿತ್ತು. ಜೋದ್ ಪುರ ಕೇಂದ್ರ ಕಾರಾಗೃಹದಲ್ಲಿ ಸಲ್ಮಾನ್ ಖಾನ್ ಎರಡು ರಾತ್ರಿ ಕಳೆದ ನಂತರ ಜಾಮೀನು ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com