ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ದೇಶಿಸಿರುವ ಬಿಜೆಪಿ ಸಮರ್ಥನೆಗಾಗಿ ಸಂಪರ್ಕ ಪ್ರಚಾರ ಹಮ್ಮಿಕೊಂಡಿದ್ದು, ಈ ಭಾಗವಾಗಿ ಅಮಿತ್ ಶಾ ಎಂಎಸ್ ಧೋನಿ ಅವರನ್ನು ಭೇಟಿ ಮಾಡಿದ್ದಾರೆ.
ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದ ಭಾಗವಾಗಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಧೋನಿ ಅವರನ್ನು ಭೇಟಿ ಮಾಡಿದ್ದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದು, ಮೋದಿ ಸರ್ಕಾರ 4 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಎಂಎಸ್ ಧೋನಿಗೆ ತಿಳಿಸಲಾಯಿತು ಎಂದು ಹೇಳಿದ್ದಾರೆ.