ಐಐಟಿ-ಹೈದರಾಬಾದ್ ವಿದ್ಯಾರ್ಥಿನಿ ಸ್ನೇಹಾ ರೆಡ್ಡಿಗೆ 1.2 ಕೋಟಿ ರು. ವೇತನ ಪ್ಯಾಕೇಜ್

ಇತ್ತೀಚೆಗಷ್ಟೇ ಐಐಟಿ - ಹೈದರಾಬಾದ್ ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಸ್ನೇಹಾ...
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಸ್ನೇಹಾ ರೆಡ್ಡಿ
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಸ್ನೇಹಾ ರೆಡ್ಡಿ
ಹೈದರಾಬಾದ್: ಇತ್ತೀಚೆಗಷ್ಟೇ ಐಐಟಿ - ಹೈದರಾಬಾದ್ ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಸ್ನೇಹಾ ರೆಡ್ಡಿ ಅವರಿಗೆ  ಗೂಗಲ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದು, ವಾರ್ಷಿಕ 1.2 ಕೋಟಿ ರುಪಾಯಿ ವೇತನ ನಿಗದಿ ಮಾಡಲಾಗಿದೆ.
ದೇಶದಾದ್ಯಂತ ಗೂಗಲ್ ನಡೆಸಿದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಐದು ಮಂದಿ ಪ್ರತಿಭಾವಂತರು ಆಯ್ಕೆಯಾಗಿದ್ದು, ಅವರಲ್ಲಿ ಸ್ನೇಹಾ ರೆಡ್ಡಿ ಸಹ ಒಬ್ಬರಾಗಿದ್ದಾರೆ.
ವಿಕಾರಾಬಾದ್ ಮೂಲದ ಸ್ನೇಹಾ ರೆಡ್ಡಿ ಅವರನ್ನು ಗೂಗಲ್ ನ್ಯೂಯಾರ್ಕ್ ಕಚೇರಿಯಲ್ಲಿರುವ ಕೃತಿಕ ಬುದ್ಧಿಮತ್ತೆ ಸಂಶೋಧನಾ ವಿಭಾಗಕ್ಕೆ ಆಯ್ಕೆ ಮಾಡಿಲಾಗಿದೆ.
ಸ್ನೇಹಾ ರೆಡ್ಡಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ್ದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದರ ಜತೆಗೆ ನಾಲ್ಕು ಚಿನ್ನದ ಪದಕಗಳನ್ನೂ ಗಳಿಸಿದ್ದಾರೆ. 
ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿರುವ ಸ್ನೇಹಾ ರೆಡ್ಡಿ ಪಿಯುಸಿಯಲ್ಲಿ ಶೇ.98.4ರಷ್ಟು ಅಂಕಗಳನ್ನು ಪಡೆದಿದ್ದಾರೆ. ಐಐಟಿ ಪ್ರವೇಶಕ್ಕಾಗಿ ನಡೆಸುವ ಜಾಯಿಂಟ್ ಎಂಟ್ರಸ್ ಎಕ್ಸಾಮ್ (ಜೆಇಇ) 2014ರಲ್ಲಿ (ಮೇಯಿನ್ಸ್) ಆಲ್‍ ಇಂಡಿಯಾ 15ನೇ ರ‍್ಯಾಂಕ್, ಜೆಇಇ (ಅಡ್ವಾನ್ಸ್‌ಡ್)ನಲ್ಲಿ 677 ರ‍್ಯಾಂಕ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com