ದೇಶ ಬಹುಮುಖ ಪ್ರತಿಭೆ ಕಳೆದುಕೊಂಡಿದೆ: ಮನಮೋಹನ್ ಸಿಂಗ್

ದೇಶ ಇಂದು ಬಹುಮುಖ ಪ್ರತಿಭೆಯ ಅಮೂಲ್ಯ ವ್ಯಕ್ತಿಯನ್ನುಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಹೇಳಿದ್ದಾರೆ. ..
ಕರುಣಾ ನಿಧಿ ಮತ್ತು ಮನ ಮೋಹನ್ ಸಿಂಗ್
ಕರುಣಾ ನಿಧಿ ಮತ್ತು ಮನ ಮೋಹನ್ ಸಿಂಗ್
Updated on
ನವದೆಹಲಿ: ದೇಶ ಇಂದು ಬಹುಮುಖ ಪ್ರತಿಭೆಯ ಅಮೂಲ್ಯ ವ್ಯಕ್ತಿಯನ್ನುಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಹೇಳಿದ್ದಾರೆ. ಮಾಜಿ ಸಿಎಂ ಕರುಣಾನಿಧಿ ಅವರ ಸಾವಿನ ಬಗ್ಗೆ  ಸಂತಾಪ ಸೂಚಿಸಿರುವ ಮನಮೋಹನ್ ಸಿಂಗ್ ಎಂ.ಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ.
ಅವರ ಸಾವಿನಿಂದಾಗಿ ದೇಶಕ್ಕೆ ಅಪಾರ ನಷ್ಟವಾಗಿದೆ, ಅವರೊಬ್ಬ ಅಪ್ರತಿಮ ಕಲಾವಿದ,ಸ ಪ್ರತಿಭಾನ್ವಿತ ಬರಹಗಾರ, ನಿಜವಾದ ನಾಯಕ, ಸದಾ ಬಡವರು ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಚಿಂತಿಸುವ ವ್ಯಕ್ತಿ, ಸಮಾಜದಲ್ಲಿ  ಹಿಂಗದುಳಿದವರ ಬಗ್ಗೆ ಸದಾ ಚಿಂತಿಸುತ್ತಿದ್ದರು ಎಂದು ಹೇಳಿದ್ದಾರೆ.
ನಾನು ತಿರುವ ಅವರನ್ನು ಗೌರವಿಸುತ್ತೇನೆ,  ಚೆನ್ನೈ ಗೆ ನಾನು ಹೋದಾಗೆಲೆಲ್ಲಾ ನನ್ನ ಮೇಲೆ ವಿಶೇಷ ಪ್ರೀತಿ ತೋರುತ್ತಿದ್ದರು, ಅವರನ್ನು ವಯಕ್ತಿವಾಗಿ ಭೇಟಿ ಮಾಡಲು ನಾನು ಸಮಯಕ್ಕಾಗಿ ಪ್ರಯತ್ನಿಸುತ್ತಿದ್ದೆ, ಎಷ್ಟೇ ವರ್ಷ ಬಂದರೂ  ಅವರನ್ನು ದೇಶ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com