ಜಿನ್ನಾ ಪ್ರಧಾನಿಯಾಗಿದ್ದರೆ ಅಖಂಡ ಭಾರತ ಉಳಿಯುತ್ತಿತ್ತು: ದಲೈ ಲಾಮಾ

ದಲೈ ಲಾಮಾ ಪದವಿಯ ರಾಜಕೀಯವಾಗಿ ಈಗ ಪ್ರಸ್ತುತವಾಗಿಲ್ಲ. ಭವಿಷ್ಯದಲ್ಲಿ ಈ ಪರಂಪರೆಯನ್ನು ಉಳಿಸಿಕೊಳ್ಳುವುದು ಅಥವಾ ಬಿಡುವುದು ಟಿಬೆಟಿಯನ್ನರ ಇಚ್ಚೆಗೆ ಬಿಟ್ಟದ್ದು....
4ನೇ ದಲೈ ಲಾಮಾ
4ನೇ ದಲೈ ಲಾಮಾ
ಪಣಜಿ: ಸ್ವತಂತ್ರ ಭಾರತದಲ್ಲಿ ಜವಾಹರಲಾಲ್ ನೆಹರು ಅವರಿಗೆ ಬದಲಾಗಿ ಜಿನ್ನಾಗೆ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದರೆ ಭಾರತ ವಿಭಜನೆಯಾಗುವ ಪ್ರಮೇಯವಿರಲಿಲ್ಲ.ಎಂದು ದಲೈ ಲಾಮಾ ಹೇಳಿದ್ದಾರೆ. 
ದಲೈ ಲಾಮಾ ಪದವಿಯ ರಾಜಕೀಯವಾಗಿ ಈಗ ಪ್ರಸ್ತುತವಾಗಿಲ್ಲ. ಭವಿಷ್ಯದಲ್ಲಿ ಈ ಪರಂಪರೆಯನ್ನು ಉಳಿಸಿಕೊಳ್ಳುವುದು ಅಥವಾ ಬಿಡುವುದು ಟಿಬೆಟಿಯನ್ನರ ಇಚ್ಚೆಗೆ ಬಿಟ್ಟದ್ದು ಎಂದು 14ನೇ ದಲೈ ಲಾಮಾ 83 ವರ್ಷದ ಬೌದ್ದ ಧರ್ಮ ಗುರು ಹೇಳಿದ್ದಾರೆ.
ದಲೈ ಲಾಮಾ ಪರಂಪರೆಯಲ್ಲಿ 14ನೆಯವರಾಗಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿರುವ ದಲೈ ಲಾಮಾ ಗೋವಾದ  ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ್ದಾರೆ.
ಚೀನಾ ರಾಜಕೀಯಕ್ಕಾಗಿ ದಲೈ ಲಾಮಾ ಪರಂಪರೆಯನ್ನು ಪ್ರತಿಪಾದಿಸುತ್ತಿದೆ. ಚೀನಾ ಸರ್ಕಾರಕ್ಕೆ ನನಗಿಂತಲೂ ಲಾಮಾ ಪದವಿ ಬಗೆಗೆ ಹೆಚ್ಚು ಕಾಳಜಿ ಇದೆ ಎಂದು ದಲೈ ಲಾಮಾ ಹೇಳಿದ್ದಾರೆ
"1969ರಲ್ಲಿಯೇ ನಾನು ದಲೈ ಲಾಮಾ ಪರಂಪರೆ ಮುಂದುವರಿಯಬೇಕೆ ಬೇಡವೆ ಎನ್ನುವುದನ್ನು ಟಿಬೆಟಿನ ಜನ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟಿದ್ದೆ. ಹಾಗೆಯೇ 2011ರ ನಂತರ ನಾನು ರಾಜಕೀಯ ಹೊಣೆಗಾರಿಕೆಯಿಂದ ಸಂಪೂರ್ಣ ನಿವೃತ್ತನಾಗಿದ್ದೇನೆ.ಈಗ ಚುನಾಯಿತ ಸರ್ಕಾರವೇ ಟಿಬೆಟ್ ಆಡಳಿತವನ್ನು ಸಂಭಾಳಿಸುತ್ತಿದೆ. ಹೀಗಾಗಿ ಈಗ ದಲೈ ಲಾಮಾ ಎನ್ನುವ ಪದವಿಗೆ ಯಾವ ರಾಜಕೀಯ ಪ್ರಾಮುಖ್ಯತೆ ಇಲ್ಲವ್ಗಿದೆ" ಲಾಮಾ ಹೇಳಿದ್ದಾರೆ.
ಟಿಬೆಟ್ ಬೌದ್ದ ಧರ್ಮಗುರು ದಲೈ ಲಾಮಾ ಎನ್ನುವುದು ಅವರ ಮೂಲ ಹೆಸರಾಗಿರದೆ ಅದೊಂದು ಪದವಿಯಾಗಿದೆ. ಟಿಬೆಟ್‌ ಬೌದ್ಧ  ಧರ್ಮದ ಗೆಲೂಗ್‌ ಧಾರ್ಮಿಕ ಪೀಠ ತನ್ನಲ್ಲಿರುವ ಅತೀ ಪ್ರಮುಖ ಸನ್ಯಾಸಿಗೆ ನಿಡುವ ಪಾರಂಪರಿಕ ಬಿರುದು ದಲೈ ಲಾಮಾ ಎಂದಾಗಿರುತ್ತದೆ. ಈ ಪರಂಪರೆಯಲ್ಲಿ ಈಗಿನ ದಲೈ ಲಾಮಾ ಹದಿನಾಲ್ಕನೇಯವರಾಗಿದ್ದಾರೆ. 1959ರಲ್ಲಿ ಸಂಭವಿಸಿದ ದಂಗೆಯ ವೇಳೆ ಟಿಬೆಟ್ ನಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದ ಲಾಮಾ ಅಂದಿನಿಂದ ಬಾರತದಲ್ಲೇ ಆಶ್ರಯ ಪಡೆದಿದ್ದಾರೆ.
ಜಿನ್ನಾ ಪ್ರಧಾನಿಯಾಗಿದ್ದರೆ ಅಖಂಡ ಭಾರತ ಉಳಿಯುತ್ತಿತ್ತು
ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಲಾಮಾ "ಮಹಾತ್ಮ ಗಾಂಧಿಯವರು ಜಿನ್ನಾಗೆ ಪ್ರಧಾನ ಮಂತ್ರಿತ್ವವನ್ನು ನೀಡಲು ಬಯಸಿದ್ದರು. ಆದರೆ ನೆಹರೂ ನಿರಾಕರಿಸಿದರು. ಅವರಿಗೆ ತಾನೇ ಪ್ರಧಾನಿಯಾಗಬೇಕೆಂದು ಮಹತ್ವಾಕಾಂಕ್ಷೆ ಇತ್ತು. "ಭಾರತದ ಪ್ರಧಾನಿಯಾಗಲು ನಾನು ಬಯಸುತ್ತೇನೆ" ಎಂದು ಆವರು ಹೇಳಿದ್ದರು ಒಂದು ವೇಳೆ ಜಿನ್ನಾ ಪ್ರಧಾನಿಯಾಗಿದ್ದಲ್ಲಿ ಭಾರತ ಎರಡು ಹೋಳಾಗುತ್ತಿರಲಿಲ್ಲ. ನೆಹರೂ ಅವರಿಂದ ಅನೇಕ ತಪ್ಪುಗಳು ಸಂಭವಿಸಿದೆ ಎಂದು ಲಾಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com