ಕರುಣಾನಿಧಿ ವಿಧಿವಶ : ರಾಷ್ಟ್ರೀಯ ಶೋಕಾಚರಣೆಗೆ ಕೇಂದ್ರದ ಆದೇಶ

ಕರುಣಾನಿಧಿಯವರ ಸಾವಿಗೆ ಸಂತಾಪ ಸೂಚಿಸಿರುವ ಕೇಂದ್ರ ಸರ್ಕಾರ, ಅಗಲಿದ ಹಿರಿಯ ಮುಖಂಡನಿಗೆ ರಾಷ್ಟ್ರೀಯ ಗೌರವ ಸಲ್ಲಿಸಲು ಆದೇಶಿಸಿದೆ.
ಕರುಣಾನಿಧಿ
ಕರುಣಾನಿಧಿ
Updated on

ನವದೆಹಲಿ: ಕರುಣಾನಿಧಿಯವರ ಸಾವಿಗೆ ಸಂತಾಪ ಸೂಚಿಸಿರುವ ಕೇಂದ್ರ ಸರ್ಕಾರ, ಅಗಲಿದ ಹಿರಿಯ ಮುಖಂಡನಿಗೆ ರಾಷ್ಟ್ರೀಯ ಗೌರವ ಸಲ್ಲಿಸಲು ಇಂದು ರಾಷ್ಟ್ರೀಯ ಶೋಕಾಚರಣೆಗೆ ಆದೇಶಿಸಿದೆ.

ಈ ಪ್ರಯುಕ್ತ ಬುಧವಾರ ದೇಶಾದ್ಯಂತ ರಾಷ್ಟ್ರ ಧ್ವಜವನ್ನು ಅರ್ಧ ಮಾತ್ರ ಹಾರಿಸಲಾಗುತ್ತದೆ. ಈ ಸಂಬಂಧ ಈಗಾಗಲೇ ಕೇಂದ್ರ  ಗೃಹ ಸಚಿವಾಲಯ  ಅಧಿಕೃತ ಆದೇಶ ಹೊರಡಿಸಿದೆ.  ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶಿಸಲಾಗಿದೆ.

ಕರುಣಾನಿಧಿ ನಿಧನ ಹಿನ್ನೆಲೆಯಲ್ಲಿ ಚೆನ್ನೈನಲ್ಲಿನ ಪೆಟ್ರೋಲ್ ಪಂಪ್ ಗಳು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಮುಚ್ಚಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com