ಎಐಎಡಿಎಂಕೆ-ಡಿಎಂಕೆ ವಿಲೀನಗೊಳಿಸಲು ಕರುಣಾನಿಧಿ ಯತ್ನ ವಿಫಲವಾದ ಕಥೆ

ಮುತ್ತುವೇಲು ಕರುಣಾನಿಧಿಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಎರಡು ಘಟನೆಗಳು ...
ಎಂ ಕರುಣಾನಿಧಿ, ಎಂ ಜಿ ರಾಮಚಂದ್ರನ್(ಸಂಗ್ರಹ ಚಿತ್ರ)
ಎಂ ಕರುಣಾನಿಧಿ, ಎಂ ಜಿ ರಾಮಚಂದ್ರನ್(ಸಂಗ್ರಹ ಚಿತ್ರ)

ಚೆನ್ನೈ: ಮುತ್ತುವೇಲು ಕರುಣಾನಿಧಿಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಎರಡು ಘಟನೆಗಳು ನಿರ್ಣಾಯಕವಾಗಿದ್ದವು. ಅದು 1972ರಲ್ಲಿ ಎಂ ಜಿ ರಾಮಚಂದ್ರನ್ ಅವರ ಉಚ್ಛಾಟನೆ ಮತ್ತು ತಾನು ಸ್ಥಾಪಿಸಿದ ಎಐಎಡಿಎಂಕೆಯನ್ನು 1979ರಲ್ಲಿ ಡಿಎಂಕೆ ಜೊತೆ ವಿಲೀನಗೊಳಿಸಲು ಪ್ರಯತ್ನಿಸಿದ್ದು.

2009ರ ಮಾರ್ಚ್ 31ರಂದು ಸಮಾರಂಭವೊಂದರಲ್ಲಿ ಕರುಣಾನಿಧಿ ಮತ್ತು ದ್ರಾವಿಡ ಕಳಗಂ ಅಧ್ಯಕ್ಷ ಕೆ ವೀರಮಣಿ, ಎಐಎಡಿಎಂಕೆ ಮತ್ತು ಡಿಎಂಕೆ ವಿಲೀನಗೊಳಿಸಲು ಕಾರಣ ಮತ್ತು ಅದನ್ನು ಮಾಜಿ ಮುಖ್ಯಮಂತ್ರಿ ಪನ್ರುತಿ ಎಸ್ ರಾಮಚಂದ್ರನ್ ಹೇಗೆ ತಡೆಯೊಡ್ಡಿದರು ಎಂದು ಬಹಿರಂಗಪಡಿಸಿದರು.

ಇಂದು ಎಐಎಡಿಎಂಕೆ ಹೊಂದಿರುವ ಧ್ವಜವನ್ನು ಪಡೆಯಲು ತಾವು ಒಪ್ಪಿಕೊಂಡಿದ್ದೆ, ಅಲ್ಲದೆ ಆರ್ಥಿಕ ಅರ್ಹತೆಯಾದ 9 ಸಾವಿರ ರೂಪಾಯಿಗಳ ಮೀಸಲಾತಿಯನ್ನು ಹಿಂಪಡೆಯಲು ಬಯಸಿದ್ದೆ ಎಂದು ಕೂಡ ಕರುಣಾನಿಧಿ ಹೇಳಿದ್ದರು. ತಾವು ಪಕ್ಷದ ಅಧ್ಯಕ್ಷನಾಗಿ ಎಂ ಜಿ ರಾಮಚಂದ್ರನ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು ಎಂದು ಹೇಳಿದ್ದೆ. ಎಂಜಿಆರ್ ಅವರು ಷರತ್ತುಗಳಿಗೆ ಒಪ್ಪಿ  ಎರಡೂ ಪಕ್ಷಗಳ ಒಗ್ಗೂಡುವಿಕೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಕೆಲ ಗಂಟೆಗಳು ಕಳೆದ ನಂತರ ಎಂಜಿಆರ್ ತಮ್ಮ ಮನಸ್ಸನ್ನು ಬದಲಿಸಿದರು ಎಂದಿದ್ದರು ವೀರಮಣಿ.

ಅವರ ಮನಸ್ಸನ್ನು ಬದಲಿಸಿದ್ದು ಪನ್ರುತಿ ರಾಮಚಂದ್ರನ್. ಅದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು ಕೂಡ. ಎರಡೂ ಪಕ್ಷಗಳು ವಿಲೀನವಾದರೆ ಎಐಎಡಿಎಂಕೆಗೆ ಸರಿಯಾದ ಸ್ಥಾನಮಾನ ಸಿಗಲಿಕ್ಕಿಲ್ಲ ಎಂದು ಎಂಜಿಆರ್ ಅವರಿಗೆ ಮನವರಿಕೆ ಮಾಡುವಲ್ಲಿ ಸಫಲರಾದರು. ನಂತರ ವಿಲೀನಗೊಳ್ಳುವ ಪ್ರಕ್ರಿಯೆ ಅಲ್ಲಿಗೆ ನಿಂತಿತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com