ನವದೆಹಲಿ: ರಾಜ್ಯಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಕೆಲವೊಮ್ಮೆ ನಾವು ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆ ಉಪಸಭಾಪತಿಯಾಗಿ ಎನ್'ಡಿಎ ಅಭ್ಯರ್ಥಿ ಹರಿವಂಶ್ ಸಿಂಗ್ ಅವರು ಭರ್ಜರಿ ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಸೋನಿಯಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ ಹರಿವಂಶ್ ನಾರಾಯಣ್ ಸಿಂಗ್ ಅವರು ಗೆಲವು ಸಾಧಿಸಿದ್ದಾರೆ.
ಒಟ್ಟು ಮತಗಳ ಪೈಕಿ ಹರಿವಂಶ ಅವರು 125 ಮತಗಳನ್ನು ಪಡೆಗು ಗೆಲವು ಸಾಧಿಸಿದ್ದರೆ, ಹರಿಪ್ರಸಾದ್ ಅವರು 105 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ರಾಜ್ಯಸಭೆ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮತಕ್ಕೆ ಹಾಕಿದರು. ಸದಸ್ಯರು ತಾವು ಕುಳಿತ ಆಸನದ ಮುಂದಿದ್ದ ಗುಂಡಿಗಳನ್ನು ಒತ್ತುವ ಮೂಲಕ ಮತ ಚಲಾಯಿಸಿದರು. ಇದರಂತೆ ಒಟ್ಟು 202 ಮತಗಳು ಚಲಾವಣೆಯಾದವು.