ಸಂಗ್ರಹ ಚಿತ್ರ
ದೇಶ
ದೆಹಲಿ: 3 ವರ್ಷದಲ್ಲಿ ಹಲವು ಸರ್ಕಾರಿ ಯೋಜನೆಗಾಗಿ 12000 ಮರಗಳ ಮಾರಣಹೋಮ!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಲವು ಸರ್ಕಾರಿ ಯೋಜನೆಗಳಿಗಾಗಿ 12000 ಮರಗಳನ್ನು ಕಡಿದು ಹಾಕಲಾಗಿದೆ...
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಲವು ಸರ್ಕಾರಿ ಯೋಜನೆಗಳಿಗಾಗಿ 12000 ಮರಗಳನ್ನು ಕಡಿದು ಹಾಕಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ ಸರ್ಕಾರಿ ಯೋಜನೆಗಳಿಗಾಗಿ 12,800 ಮರಗಳನ್ನು ಕಡಿದು ಹಾಕಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದ್ದಾರೆ.
ಇದೇ ವೇಳೆ ದೇಶಾದ್ಯಂತ ಹಲವು ಯೋಜನೆಗಳಿಗಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ ಎಂದು ಕೇಂದ್ರ ಸಚಿವರೊಬ್ಬರು ತಿಳಿಸಿದರು.
ಇನ್ನು ದೆಹಲಿಯಾದ್ಯಂತ 10 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲು ಎನ್ಬಿಸಿಸಿ, ಸಿಪಿಡಬ್ಲ್ಯೂಡಿ, ಡಿಎಂಆರ್ಸಿ ಉದ್ದೇಶಿಸಿದೆ ಎಂದು ಸಚಿವರು ಹೇಳಿದ್ದಾರೆ.

