ಕಾಶ್ಮೀರ ವಿಶೇಷ ಸ್ಥಾನಮಾನ ರಕ್ಷಣೆ ಒಂದು ಪ್ರದೇಶ, ಧರ್ಮಕ್ಕೆ ಸೀಮಿತವಾಗಿಲ್ಲ: ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರಕ್ಷಿಸುವುದೆಂದರೆ ನಿರ್ದಿಷ್ಟ ಪ್ರದೇಶ ಅಥವಾ ಧರ್ಮಕ್ಕೆ ಸೀಮಿತವಾದ ಕೆಲಸವಲ್ಲ, ರಾಜ್ಯದ ಜನತೆ ಅದರ ಪ್ರಾಮುಖ್ಯತೆಯನ್ನು ಮತ್ತು ಪವಿತ್ರತೆಯನ್ನು.....
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರಕ್ಷಿಸುವುದೆಂದರೆ ನಿರ್ದಿಷ್ಟ ಪ್ರದೇಶ ಅಥವಾ ಧರ್ಮಕ್ಕೆ ಸೀಮಿತವಾದ ಕೆಲಸವಲ್ಲ, ರಾಜ್ಯದ ಜನತೆ ಅದರ ಪ್ರಾಮುಖ್ಯತೆಯನ್ನು ಮತ್ತು ಪವಿತ್ರತೆಯನ್ನು ಅರಿತುಕೊಂಡಿದ್ದಾರೆ. ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಸಂವಿಧಾನದ  ಆರ್ಟಿಕಲ್ 35-ಎ ಅನ್ನು ಬೆಂಬಲಿಸಿದ್ದ ಜಮ್ಮು ಪ್ರದೇಶದ ಇಬ್ಬರು ಬಿಜೆಪಿ ಶಾಸಕರ ಹೇಳಿಕೆಯನ್ನು ಉದ್ದರಿಸಿ ಮುಫ್ತಿ ಈ ಮಾತು ಹೇಳಿದ್ದಾರೆ. ಆರ್ಟಿಕಲ್ 35-ಎ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಬಿಜೆಪಿಯ ಇಬ್ಬರು ಶಾಸಕರಾದ  ರಾಜೇಶ್ ಗುಪ್ತಾ ಮತ್ತು ಡಾ. ಗಗನ್ (ಭಗತ್) ಅವರುಗಳು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35-ಎ ಅನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಕುರಿತಂತೆ ಪ್ರತಿಕ್ರಯಿಸಿರುವ ಮುಫ್ತಿ ಶೇಷ ಸ್ಥಾನಮಾನವನ್ನು ರಕ್ಷಿಸುವುದು ಪ್ರದೇಶ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ರಾಜ್ಯದ ಜನರು ಅದರ ಪ್ರಾಮುಖ್ಯತೆಯನ್ನು ಅರಿತುಕೊಂಡಿದ್ದಾರೆ ಎ<ದು ಟ್ವಿಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಿಶೇಷ ಸ್ಥಾನಮಾನ ರಕ್ಷಣೆಗಾಗಿ ಏಕಾಂಗಿ ಹೋರಾಟ ನಡೆಸಿದ್ದ ಮೆಹಬೂಬ ಮುಫ್ತಿ ರಾಜಕೀಯ ದೃಷ್ಟಿಕೋನಗಳು ಅಥವಾ ಸಂಬಂಧಗಳ ಹೊರತಾಗಿಯೂ ನಾವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಾಪಾಡುವ ಸಂಬಂಧ ಒಂದೇ ಃಆದಿಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತದ ಉಲ್ಲಂಘನೆಯ ಆರೋಪ ವಿಚಾರಣೆಗಾಗಿ ಐವರು ನ್ಯಾಯಾಧೀಶರ ಸಂವಿಧಾನದ ಪೀಠಕ್ಕೆ ಆರ್ಟಿಕಲ್ 35-ಎ ವಿಚಾರಣೆಯನ್ನು ವಹಿಸಬೇಕೆಂದು ಮೂರು ನ್ಯಾಯಾಧೀಶರ ಪೀಠವು  ಆಗಸ್ಟ್ 6ರಂದು ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com