ಕೇಂದ್ರ ಸಚಿವರಿಗೆ ಏನೂ ಕೆಲಸ ಇಲ್ಲ, ಎಲ್ಲಾ ನಿರ್ಧಾರ ಪ್ರಧಾನಿಯದ್ದು: ಅರುಣ್ ಶೌರಿ, ಯಶ್ವಂತ್ ಸಿನ್ಹಾ!

ಕೇಂದ್ರ ಸಚಿವಾಲಯಗಳ ಎಲ್ಲ ಮುಖ್ಯ ನಿರ್ಧಾರಗಳನ್ನು ಪ್ರಧಾನಿ ಕಾರ್ಯಾಲಯವೊಂದೇ ತೆಗೆದುಕೊಳ್ಳುತ್ತಿದೆ; ಕೇಂದ್ರ ಸಚಿವರುಗಳು ಏನೂ ಮಾಡುತ್ತಿಲ್ಲ' ..
ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ
ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ
ಮುಂಬಯಿ: ಕೇಂದ್ರ ಸಚಿವಾಲಯಗಳ ಎಲ್ಲ ಮುಖ್ಯ ನಿರ್ಧಾರಗಳನ್ನು ಪ್ರಧಾನಿ ಕಾರ್ಯಾಲಯವೊಂದೇ ತೆಗೆದುಕೊಳ್ಳುತ್ತಿದೆ; ಕೇಂದ್ರ ಸಚಿವರುಗಳು ಏನೂ ಮಾಡುತ್ತಿಲ್ಲ' ಎಂದು ಮಾಜಿ ಕೇಂದ್ರ ಸಚಿವರಾದ ಯಶ್ವಂತ್‌ ಸಿನ್ಹಾ  ಮತ್ತು ಅರುಣ್‌ ಶೌರಿ ಆರೋಪಿಸಿದ್ದಾರೆ.
ಫ್ರಾನ್ಸ್‌ ಜತೆಗಿನ ರಾಫೇಲ್‌ ಫೈಟರ್‌ ಜೆಟ್‌ ವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ರಿಮಿನಲ್‌ ದುರ್ವರ್ತನೆಯನ್ನು ತೋರಿದೆ ಎಂದು ಆರೋಪಿಸಿ ಸಿನ್ಹಾ  ಮತ್ತು  ಶೌರಿ ಈ ರೀತಿ ದೂರಿದ್ದಾರೆ.
ಸಿನ್ಹಾ ಮತ್ತು ಶೌರಿ ಜತೆಗೆ ಬಿಜೆಪಿಯ ಇನ್ನೋರ್ವ ಬದಿಗೊತ್ತಲ್ಪಟ್ಟಿರುವ ನಾಯಕ ಶತ್ರುಘ್ನ ಸಿನ್ಹಾ ಕೂಡ ಜೊತೆಗೂಡಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಂಬಯಿಯಲ್ಲಿ ನಡೆದ "ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಕಾರ್ಯಕ್ರಮದಲ್ಲಿ  ಈ ಮೂವರು ಹಿರಿಯ ನಾಯಕರು ಪಾಲ್ಗೊಂಡಿದ್ದರು. ಭಾರತ - ಫ್ರಾನ್ಸ್‌ ರಾಫೇಲ್‌ ಫೈಟರ್‌ ಜೆಟ್‌ ವಹಿವಾಟಿನಲ್ಲಿನ ಅವ್ಯವಹಾರ, ಭ್ರಷ್ಟಾಚಾರ ಮತ್ತು ಭಾರೀ ಬ್ಯಾಂಕ್‌ ಸಾಲ ಸುಸ್ತಿಗಾರ ಉದ್ಯಮಿಗಳೊಂದಿಗೆ ಸರ್ಕಾರ ಕೈ ಜೋಡಿಸಿದೆ ಎಂದು ಆಪಾದಿಸಿದ್ದಾರೆ.
ಪ್ರಧಾನಿ ಮೋದಿ 500 ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅಮಾನ್ಯ ಮಾಡುವ ವಿಷಯ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿಗೂ ತಿಳಿದಿರಲಿಲ್ಲ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com