Mani Shankar Aiyar
Mani Shankar Aiyar

ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ: ಮಣಿಶಂಕರ್ ಅಯ್ಯರ್

ವಿವಾದಾತ್ಮಕ ಸುದ್ದಿಗಳಿಗೇ ಪ್ರಸಿದ್ಧಿ ಗಳಿಸಿರುವ ಮಣಿಶಂಕರ್ ಅಯ್ಯರ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮುಸ್ಲಿಮರನ್ನು ನಾಯಿಮರಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ
ವಿವಾದಾತ್ಮಕ ಸುದ್ದಿಗಳಿಗೇ ಪ್ರಸಿದ್ಧಿ ಗಳಿಸಿರುವ ಮಣಿಶಂಕರ್ ಅಯ್ಯರ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮುಸ್ಲಿಮರನ್ನು ನಾಯಿಮರಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು  ಹೇಳಿದ್ದಾರೆ. 
ಅಸಹಿಷ್ಣುತೆ ಹಾಗೂ ರಾಷ್ಟ್ರೀಯ ಅಭಿಯಾನದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಮಣಿಶಂಕರ್ ಅಯ್ಯರ್, 2002 ರಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಮರು ಜೀವಕಳೆದುಕೊಂಡಿದ್ದರ ಬಗ್ಗೆ ನೋವಿದೆಯಾ ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗಿತ್ತು, ಅದಕ್ಕೆ ಕಾರಿನಡಿ ಒಂದು ನಾಯಿಮರಿ ಸಿಲುಕಿದರೂ ಸಹ ನನಗೆ ನೋವಾಗುತ್ತದೆ ಎಂದಿದ್ದರು. ಮುಸ್ಲಿಮರನ್ನು ನಾಯಿಮರಿಗೆ ಹೋಲಿಕೆ ಮಾಡಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. 
ಗುಜರಾತ್ ಹತ್ಯಾಕಾಂಡವಾದಾಗ ಮುಸ್ಲಿಂ ನಿರಾಶ್ರಿತ ಕ್ಯಾಂಪ್ ಗಳಿಗೆ ಮೋದಿ 24 ದಿನಗಳ ಅವಧಿಯಲ್ಲಿ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಅಂದಿನ ಪ್ರಧಾನಿ ವಾಜಪೇಯಿ ಅವರು ಆಗಮಿಸಿದಾಗಷ್ಟೇ ಶಾ ಅಲಂ ಮಸೀದಿಗೆ ಭೇಟಿ ನೀಡಿದ್ದರು. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. 
ನನಗೆ ಹಿಂದೂಗಳು, ಬೌದ್ಧರು, ಜೈನರು, ಕ್ರೈಸ್ತರು, ಮುಸ್ಲಿಮರ ಬಗ್ಗೆ ಹೆಮ್ಮೆ ಇದೆ ಮುಸ್ಲಿಮರು ಈ ದೇಶವನ್ನು 666 ವರ್ಷಗಳ ಕಾಲ ಆಳಿದರು. ಈ ಅವಧಿಯಲ್ಲಿ ಶೇ.24 ರಷ್ಟು ಮಂದಿ ಹಿಂದೂಗಳು ಮಾತ್ರ ಇಸ್ಲಾಂ ಗೆ ಮತಾಂತರಗೊಂಡರು ಶೇ.76 ರಷ್ಟು ಮಂದಿ ಮತಾಂತರಗೊಳ್ಳದೇ ಹಿಂದೂಗಳಾಗೇ ಉಳಿದರು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com