ವಿಶ್ವಸಂಸ್ಥೆಯಲ್ಲಿ ಹಿಂದಿ ಅಧಿಕೃತ ಭಾಷೆಯನ್ನಾಗಿ ಮಾಡುವುದು ಸುಲಭದ ಕೆಲಸ- ಸುಷ್ಮಾ ಸ್ವರಾಜ್

ಹಿಂದಿ ಭಾಷೆಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿ ಮಾಡುವುದು ಸುಲಭದ ಕೆಲಸವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ: ಹಿಂದಿ ಭಾಷೆಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿ ಮಾಡುವುದು ಸುಲಭದ ಕೆಲಸವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

11ನೇ ವಿಶ್ವ ಹಿಂದಿ ಸಮ್ಮೇಳನ ಅಂಗವಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವವನ್ನು 3/2 ರಷ್ಟು ಬಹುಮತದೊಂದಿಗೆ  ಎಲ್ಲಾ ಸದಸ್ಯ  ರಾಷ್ಟ್ರಗಳು ಬೆಂಬಲಿಸಬೇಕು,  ಆದರೆ ಬೆಂಬಲ ನೀಡುವ ರಾಷ್ಟ್ರಗಳು ವೆಚ್ಚವನ್ನು ಭರಿಸಬೇಕಾಗುತ್ತದೆ. ಇದರಿಂದಾಗಿ ಆರ್ಥಿಕವಾಗಿ ದುರ್ಬಲವಾಗಿರುವ ರಾಷ್ಟ್ರಗಳಿಗೆ ಕಾರ್ಯಸೂಚಿಯನ್ನು ಬೆಂಬಲಿಸುವುದು ಕಷ್ಟಕರವೆಂದು ಸುಷ್ಮಾ ಸ್ವರಾಜ್ ಹೇಳಿದರು.

 193 ಸದಸ್ಯ ರಾಷ್ಟ್ರಗಳ ಪೈಕಿ 177 ರಾಷ್ಟ್ರಗಳ ಬೆಂಬಲ ಗಳಿಸಿದ್ದರೆ  ಉಳಿದ 129 ರಾಷ್ಟ್ರಗಳ ಬೆಂಬಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಭಾರತ ಹೊರತುಪಡಿಸಿ, ಜರ್ಮನಿ, ಜಪಾನ್ ಮುಂತಾದ ದೇಶಗಳು ಈ ನಿಯಮವನ್ನು ರದ್ದುಗೊಳಿಸಬೇಕೆಂದು ಪ್ರಯತ್ನಿಸಿದ್ದವು, ಆದರೆ ವಿಶ್ವಸಂಸ್ಥೆ ಇದನ್ನು ರದ್ದುಗೊಳಿಸಿಲ್ಲ,ಆ ರಾಷ್ಟ್ರಗಳಂತೆ ನಾವು ನಾವು ಎಲ್ಲ ಖರ್ಚುಗಳನ್ನು  ಭರಿಸುತ್ತೇವೆ ಎಂದು ಹೇಳಿದ್ದೇವೆ ಆದರೆ ವಿಶ್ವಸಂಸ್ಥೆ ಅನುಸರಿಸಲು ಮುಂದಾಗುತ್ತಿಲ್ಲ ಎಂದು ಅವರು ತಿಳಿಸಿದರು.

 ಆದಾಗ್ಯೂ, ವಿಶ್ವಸಂಸ್ಥೆ ಅಂತಹ ಜಾಗತಿಕ ವೇದಿಕೆಗಳಲ್ಲಿ ಹಿಂದಿ ಭಾಷೆಗೆ ಮಾನ್ಯತೆ ಸಿಗುವಂತೆ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ . ಕಳೆದ ತಿಂಗಳು  ಹಿಂದಿಯಲ್ಲಿ ಟ್ವಿಟರ್ ಖಾತೆ ತೆರೆಯಲಾಗಿದೆಯ ಹಿಂದಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಮಾರಿಷಸ್ ನಲ್ಲಿರುವ ವಿಶ್ವ ಹಿಂದಿ ಸಚಿವಾಲಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದ್ದರು ಎಂದು ಸುಷ್ಮಾ ಸ್ವರಾಜ್ ತಿಳಿಸಿದರು.

ಆಗಸ್ಟ್ 18 ರಿಂದ ಆಗಸ್ಟ್ 20 ರವರೆಗೆ ವಿಶೇಷ ವಿಮಾನದಲ್ಲಿ ನಡೆಯಲಿರುವ ಹಿಂದಿ ಸಮ್ಮೇಳನದಲ್ಲಿ ಭಾರತೀಯ ನಿಯೋಗವು ಪ್ರಯಾಣಿಸುತ್ತಿರುವುದು ಇದೇ ಮೊದಲ ಬಾರಿ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com