ವಿ.ಎಸ್. ನೈಪಾಲ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರ ಸಂತಾಪ

ನೊಬೆಲ್ ಸಾಹಿತ್ಯ ಪ್ರಶಸ್ತಿ ಲೇಖಕ ವಿ. ಎಸ್. ನೈಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿ.ಎಸ್, ನೈಪಾಲ್
ವಿ.ಎಸ್, ನೈಪಾಲ್

ನವದೆಹಲಿ: ನೊಬೆಲ್  ಸಾಹಿತ್ಯ  ಪ್ರಶಸ್ತಿ ಲೇಖಕ ವಿ. ಎಸ್. ನೈಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ  ರಾಜಕೀಯ ಕ್ಷೇತ್ರದ ಹಲವು ಗಣ್ಯರು  ಸಂತಾಪ ಸೂಚಿಸಿದ್ದಾರೆ.

ವಿ.ಎಸ್. ನೈಪಾಲ್ ಅವರ ನಿಧನದಿಂದಾಗಿ ವಿಶ್ವ ಸಾಹಿತ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು  ಮೋದಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ವಸಾಹತುಶಾಹಿ, ಆದರ್ಶವಾದಿ, ಧರ್ಮ ಮತ್ತು ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ವಿಮರ್ಶಾತ್ಮಕ ವ್ಯಾಖ್ಯಾನಗಳಿಂದ ನೈಪಾಲ್  ಹೆಸರುವಾಸಿಯಾಗಿದ್ದರು.  85 ವರ್ಷದ ನೈಪಾಲ್  ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ನೈಪಾಲ್ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ 1971ರಲ್ಲಿ  ಮ್ಯಾನ್ ಬುಕರ್  , 1990ರಲ್ಲಿ ನೈಟ್ ಹುಡ್  ಪ್ರಶಸ್ತಿ  ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದವು. 2001ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಬಂದಿತ್ತು.  ಇತಿಹಾಸ, ಸಂಸ್ಕೃತಿ, ವಸಾಹತುಷಾಹಿ, ರಾಜಕೀಯ ಸೇರಿದಂತೆ ಹಲವು ವಿಚಾರಗಳಲ್ಲಿ ಅವರ  ವ್ಯಾಪಕ ಕಾರ್ಯಗಳಿಂದ  ಅವರು ನೆನಪಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ  ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com