ಪಲ್ಲವಿ ಜೋಷಿ
ದೇಶ
ರಾಫೆಲ್ ಒಪ್ಪಂದ : ಮಾಜಿ ಟಿವಿ ಕಲಾವಿದೆ ಪಲ್ಲವಿ ಜೋಷಿ ವಿಡಿಯೋ ಟ್ರೆಂಡಿಂಗ್ !
ರಾಫೆಲ್ ಒಪ್ಪಂದ ಸಂಬಂಧ ಮಾಜಿ ಟಿವಿ ಕಲಾವಿದೆ ಪಲ್ಲವಿ ಜೋಷಿ ಟ್ವಿಟರ್ ನಲ್ಲಿ ಹಾಕಿರುವ ವಿಡಿಯೋ ಟ್ರೆಂಡಿಂಗ್ ಆಗುತ್ತಿದೆ.
ನವ ದೆಹಲಿ : ರಾಫೆಲ್ ಒಪ್ಪಂದ ಸಂಬಂಧ ಮಾಜಿ ಟಿವಿ ಕಲಾವಿದೆ ಪಲ್ಲವಿ ಜೋಷಿ ಟ್ವಿಟರ್ ನಲ್ಲಿ ಹಾಕಿರುವ ವಿಡಿಯೋ ಟ್ರೆಂಡಿಂಗ್ ಆಗುತ್ತಿದೆ.
ರಾಫೆಲ್ ಒಪ್ಪಂದ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಿಪಕ್ಷಗಳು ಇಂದು ಡುಮ್ಮಿಸ್ ಗಾಗಿ ರಾಫೆಲ್ ಒಪ್ಪಂದ ಎಂಬ ವಿಡಿಯೋ ಬಿಡುಗಡೆ ಮಾಡಿವೆ.ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಗಾಗಿ ಸರ್ಕಾರ ವಿವರವನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಹೌಸಿಂಗ್ ಸೂಸೈಟಿಯ ಭದ್ರತಾ ವ್ಯವಸ್ಥೆ ಸುಧಾರಣೆಗಾಗಿ ಫ್ರೆಂಚ್ ಕಂಪನಿಯೊಂದಿಗೆ ಹೌಸಿಂಗ್ ಸೂಸೈಟಿ ಕಾರ್ಯದರ್ಶಿ ಸೇರಿಕೊಳ್ಳುವ ಉದಾಹರಣೆಯೊಂದಿಗೆ ರಾಫೆಲ್ ಒಪ್ಪಂದ ಕುರಿತು ಪಲ್ಲವಿ ಜೋಷಿ ಈ ವಿಡಿಯೋದಲ್ಲಿ ವಿವರಣೆ ನೀಡಿದ್ದಾಳೆ.
ಪಲ್ಲವಿ ಜೋಷಿ ಪ್ರಸ್ತುತ ಹೌಸಿಂಗ್ ಸೂಸೈಟಿಯ ಕಾರ್ಯದರ್ಶಿಯಾಗಿದ್ದು, ಜಾನ್ ಲಾಕ್ ಸಿಸ್ಟಂಗಾಗಿ ಫ್ರೆಂಚ್ ಕಂಪನಿಯೊಂದಿಗೆ ಮಾತುಕತೆ ನಡೆಸಲು 10 ವರ್ಷ ವ್ಯಯಿಸಿದ್ದಾಗಿ ಆಕೆ ಈ ವಿಡಿಯೋದಲ್ಲಿ ಹೇಳಿದ್ದಾಳೆ.
ರಾಫೆಲ್ ಒಪ್ಪಂದದಿಂದಾಗಿ ಭಾರತ 12.5 ಕೋಟಿ ರೂ. ಉಳಿಸಿದೆ ಎಂದು ಹೇಳಿ ಪಲ್ಲವಿ ಜೋಷಿ ಕಣ್ಮರೆಯಾಗುತ್ತಾಳೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ