ಅರೆಸೇನಾಪಡೆ ಹಾಗೂ ಪೊಲೀಸ್ ಇಲಾಖೆಯ 942 ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕವನ್ನು ಪ್ರಕಟಿಸಲಾಗಿದೆ. ಸಿಆರ್ ಪಿಎಫ್ ನ ಪೇದೆ ಶರೀಫ್-ಉದ್-ದಿನ್-ಗಾನೀ ಹಾಗೂ ಮುಖ್ಯ ಪೇದೆ ಮೊಹದ್ ಟಾಫೈಲ್ ಗೆ ಮರಣೋತ್ತರವಾಗಿ ರಾಷ್ಟ್ರಪತಿ ಪದಕವನ್ನು ಘೋಷಿಸಲಾಗಿದೆ. ನಕ್ಸಲ್ ಸಮಸ್ಯೆ ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಕೊನೆಗಾಣಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಶೌರ್ಯ ಪ್ರದರ್ಶಿಸಿದ್ದ 89 ಸಿಬ್ಬಂದಿಗಳಿಗೂಪದಕಗಳನ್ನು ಪ್ರಕಟಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಆರ್ ಪಿಎಫ್ ಗೆ ಹೆಚ್ಚಿನ ಪದಕಗಳು ಲಭ್ಯವಾಗಿದೆ.