ಛತ್ತೀಸ್ ಗಢ ರಾಜ್ಯಪಾಲರಾಗಿ ಆನಂದಿ ಬೆನ್ ಗೆ ಹೆಚ್ಚುವರಿ ಹೊಣೆಗಾರಿಕೆ: ರಾಷ್ಟ್ರಪತಿ ಆದೇಶ

ಮಧ್ಯಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರರಿಗೆ ಹೆಚ್ಚುವರಿ ಹೊಣೆಗಾರಿಕೆಯಾಗಿ ಛತ್ತೀಸ್ ಗಢರಾಜ್ಯಪಾಲರ ಹುದ್ದೆ ನೀಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಪ್ರಕಟಣೆ ಹೊರಡಿಸಿದ್ದಾರೆ.
ಆನಂದಿ ಬೆನ್ ಪಟೇಲ್
ಆನಂದಿ ಬೆನ್ ಪಟೇಲ್
ನವದೆಹಲಿ:  ಮಧ್ಯಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರರಿಗೆ ಹೆಚ್ಚುವರಿ ಹೊಣೆಗಾರಿಕೆಯಾಗಿ ಛತ್ತೀಸ್ ಗಢ ರಾಜ್ಯಪಾಲರ ಹುದ್ದೆ ನೀಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಪ್ರಕಟಣೆ ಹೊರಡಿಸಿದ್ದಾರೆ.
ಛತ್ತೀಸ್ ಗಢ ರಾಜ್ಯಪಾಲರಾಗಿದ್ದ ಬಲರಾಮ್ ದಾಸ್ ಟಂಡನ್ ನಿಧನರಾದ ಹಿನ್ನೆಲೆಯಲ್ಲಿ ಆನಂದಿ ಬೆನ್ ಈ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯಕ್ಕೆ ಹೊಸ ರಾಜ್ಯಪಾಲರ ಅಧಿಕೃತ ನೇಮಕವಾಗುವವರೆಗೆ ಆನಂದಿ ಬೆನ್ ಪಟೇಲ್  ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ತಿಳಿಸಿದೆ.
ಜನಸಂಘ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಬಲರಾಮ್ ಜಿ ದಾಸ್ ಟಂಡನ್ 2014ರ ಜುಲೈನಲ್ಲಿ ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಕವಾಗಿದ್ದರು.90 ವರ್ಷದ ಟಂಡನ್ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com