ರೈಫಲ್‏ಮ್ಯಾನ್ ಔರಂಗಜೆಬ್, ಮೇಜರ್ ಆದಿತ್ಯ ಕುಮಾರ್ ಗೆ ಶೌರ್ಯ ಚಕ್ರ ಪುರಸ್ಕಾರ

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರೈಫಲ್ ಮ್ಯಾನ್ ಔರಂಗಜೆಬ್ ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ
ರೈಫಲ್ ಮ್ಯಾನ್  ಔರಂಗಜೆಬ್
ರೈಫಲ್ ಮ್ಯಾನ್ ಔರಂಗಜೆಬ್

ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ  ಮರಣೋತ್ತರವಾಗಿ ರೈಫಲ್ ಮ್ಯಾನ್  ಔರಂಗಜೆಬ್    ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ

ಈ ವರ್ಷದ ಜೂನ್ ತಿಂಗಳಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ರೈಫಲ್‏ಮ್ಯಾನ್ ಔರಂಗಜೆಬ್  ಉಗ್ರರಿಂದ ಅಪಹರಣಕ್ಕೊಳಗಾಗಿ  ಹತ್ಯೆಗೀಡಾಗಿದ್ದರು. 44 ವರ್ಷದ ಔರಂಗಜೆಬ್ ರಂಜಾನ್ ಹಬ್ಬದ ಆಚರಣೆಗಾಗಿ ತಮ್ಮ ಮನೆಗೆ ಹೋಗಿದ್ದಾಗ ಉಗ್ರರಿಂದ ಅಪಹರಣಕ್ಕೊಳಗಾಗಿದ್ದರು.

ಈ ಮಧ್ಯೆ  ಮೇಜರ್ ಆದಿತ್ಯ ಕುಮಾರ್ ಈ ವರ್ಷದ ಜನವರಿಯಲ್ಲಿ ಬೆಳಕಿಗೆ ಬಂದಿದ್ದರು. ಶೂಪಿಯಾನ್ ಜಿಲ್ಲೆಯ ಗನೊವ್ ಪೊರಾ ಗ್ರಾಮದ ಬಳಿ ಕಲ್ಲು ತೂರಾಟ  ಸಂಭವಿಸಿದಾಗ ಆದಿತ್ಯ ಕುಮಾರ್   ಗುಂಡಿನ ದಾಳಿ ನಡೆಸಿದಾಗ ಮೂವರು ನಾಗರಿಕರು ಸಾವನ್ನಪ್ಪಿದ್ದರು.

ನಂತರ ಜಮ್ಮು-ಕಾಶ್ಮೀರ ಸರ್ಕಾರ ತನಿಖೆಗೆ ಆದೇಶಿಸಿ ಸೆಕ್ಷನ್ 302 ( ಹತ್ಯೆ )  ಮತ್ತು 307 ( ಹತ್ಯೆಗೆ ಯತ್ನ )  ಆಧಾರದ ಮೇಲೆ ಎಫ್ ಐಆರ್ ದಾಖಲಿಸಿತ್ತು. ಇದನ್ನು  ಮೇಜರ್ ಆದಿತ್ಯ ಅವರ ತಂದೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯ   ಕುಮಾರ್ ಹೆಸರು ಇಲ್ಲ ಎಂದು ಸರ್ಕಾರ ಹೇಳಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com