ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ವಿಶ್ವಕ್ಕೆ ಈಗ ಭಾರತೀಯರ ಅವಶ್ಯಕತೆ ಇದೆ!

ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು. 
72ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಇಂದು ಭಾರತ ವಿಶ್ವದ ಭೂಪಟದಲ್ಲಿ ಛಾಪು ಮೂಡಿಸಿದೆ. ಇಂದು ಭಾರತ ಸಾಮಾನ್ಯ ಭಾರತ ಬದಲಿಗೆ ಬಲಿಷ್ಠ ಭಾರತವಾಗಿ ಪ್ರಜ್ವಲಿಸುತ್ತಿದೆ ಎಂದರು. 
ದೇಶದಲ್ಲಿ ಯಾವುದೇ ಜಾಗದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ನಮ್ಮ ಯೋಧರು ಅಲ್ಲಿಗೆ ಹೋಗುತ್ತಾರೆ. ಗಡಿದಾಟಿ ಸರ್ಜಿಕಲ್ ಸ್ಟ್ರೈಕ್ ಮಾಡುವ ತಾಕತ್ತು ನಮ್ಮ ಸೇನೆಗಿದೆ. ಒಂದು ನಿರ್ದಿಷ್ಠ ಗುರಿ ಸೇನೆಗಿದೆ ಎಂದು ಹೇಳಿದರು. 
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಪ್ರಮುಖ ಅಂಶಗಳು:
* ಇಂದು ದೇಶದ ಸುಪ್ರೀಂಕೋರ್ಟ್​ನಲ್ಲಿ ಮೂರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಮಹಿಳಾ ಸ್ಥಾಯಿ ಕಮೀಟಿ ಘೋಷಣೆ. ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮಹಿಳೆಯರಿಗೆ ಆದ್ಯತೆ, ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೆ ಮಹಿಳೆಯರು ಅಧಿಕಾರ ನಡೆಸಬೇಕು ಎಂದು ಮೋದಿ ಹೇಳಿದ್ದಾರೆ. 
* ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರಾಕ್ಷಿಸಿ ಕೃತ್ಯಗಳನ್ನ ಸರ್ಕಾರ ಸಹಿಸುವುದಿಲ್ಲ. ರಾಜಸ್ಥಾನದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರನ್ನ ಶಿಕ್ಷೆ ನೀಡಲಾಗಿದೆ ಎಂದರು. 
* ಬಡವರಿಗೆ ನೀಡುವ ಅಕ್ಕಿ, ಗೋದಿಯಲ್ಲೂ ಗೋಲ್​ಮಾಲ್​ ನಡೆಯುತ್ತಿತ್ತು. ಇದಕ್ಕೆ ಬ್ರೇಕ್​ ಹಾಕಿದೆ. 
* ಭಾರತೀಯರ ಆತ್ಮವಿಶ್ವಾಸ ಹೆಚ್ಚಿದೆ. ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ
* ರೆಡ್​ ಟೇಪ್​ ಆಡಳಿತಕ್ಕೆ ಬ್ರೇಕ್​ ಬಿದ್ದಿದೆ. ಇಂದು ವಿಶ್ವವೇ ಭಾರತದತ್ತ ನೋಡುತ್ತಿದೆ. 
* ಈಶಾನ್ಯ ರಾಜ್ಯಗಳು ಎಂದಿಗಿಂತ ಇಂದು ಅಭಿವೃದ್ಧಿ ಹೊಂದುತ್ತಿವೆ. ರಾಷ್ಟ್ರೀಯ ಹೆದ್ದಾರಿ, ಏರ್​ವೇಸ್​ ಸೇರಿದಂತೆ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ನಾಲ್ಕು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಿಗೆ ದೆಹಲಿ ಹತ್ತಿರವಾಗಿವೆ. ಇಲ್ಲಿ ಪ್ರಗತಿಯ ಹೊಸ ಶಕೆ ಶುರುವಾಗಿದೆ. 
* ಸ್ಟಾರ್ಟ್​ ಅಪ್​, ಈ ಕಾಮರ್ಸ್​ ಹೀಗೆ ಎಲ್ಲ ರಂಗಗಳಲ್ಲಿ ಬದಲಾವಣೆ ಆಗಿದೆ.  
* ಒಂದೇ ಬಾರಿ 104  ಉಪಗ್ರಹ ಹಾರಿಸಿ ವಿಶ್ವ ಅಚ್ಚರಿ ಪಡುವಂತೆ ಮಾಡಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು. ನಾವು ಮಂಗಳನ ಅಂಗಳ ಮುಟ್ಟಿ ಬಂದಿದ್ದೇವೆ. ಇದು ನಮ್ಮ ದೇಶದ ವಿಜ್ಞಾನಿಗಳ ಮಹಾನ್​ ಸಾಧನೆ. ಬಾಹ್ಯಾಕಾಶದಲ್ಲಿ ದೇಶ ಮಹತ್ತರ ಸಾಧನೆ ಮಾಡಿದೆ. 2022 ಕ್ಕೆ ಭಾರತದ ಪುತ್ರ ಅಥವಾ ಪುತ್ರಿ ಅಂತರಿಕ್ಷ ಯಾತ್ರೆ ಕೈಗೊಳ್ಳಲಿದ್ದಾರೆ. ಇದು ನಮ್ಮ ಸಂಕಲ್ಪ, ಈ ಮೂಲಕ ಭಾರತ ಹೊಸ ಅಧ್ಯಾಯ ಶುರು ಮಾಡಲಿದೆ. ಅಂತರಿಕ್ಷ ಕ್ಷೇತ್ರದಲ್ಲಿ ವಿಕ್ರಮ ಸಾಧಿಸಲು ಸನ್ನದ್ಧರಾಗಿದ್ದಾರೆ.
* ಪಿಂಚಣಿ ಲಾಭ ಎಲ್ಲರಿಗೂ ಸಿಗುವಂತೆ ಮಾಡಿದೆ.
* ನಾವು ಭ್ರಷ್ಟಾಚಾರ- ಕಪ್ಪು ಹಣಕ್ಕೆ ಬ್ರೇಕ್​ ಹಾಕಿದ್ದೇವೆ. ಸರ್ಕಾರ ನಕಲಿ ಕಂಪನಿಗಳನ್ನ ನಿರ್ಮೂಲನೆ ಮಾಡಿದೆ. 3 ಲಕ್ಷ ನಕಲಿ ಕಂಪನಿಗಳು ಬಾಗಿಲು ಹಾಕಿವೆ. ಇಂತಹವರ ವಿರುದ್ಧ ಕೇಸ್ ದಾಖಲಿಸಲಾಗಿದೆ.  
* ಜಿಎಸ್​ಟಿ ಬಂದ ಮೇಲೆ ಎಲ್ಲರೂ ಪ್ರಾಮಾಣಿಕತೆಯಿಂದ ತೆರಿಗೆ ಕಟ್ಟುತ್ತಿದ್ದಾರೆ. ಎಲ್ಲರೂ ತೆರಿಗೆ ಕಟ್ಟುವ ಮೂಲಕ ಮೂರು ಕೋಟಿ ಕುಟುಂಬ ಅನ್ನ ತಿನ್ನುತ್ತಿವೆ. 2014ಕ್ಕೆ ಮೊದಲು ನಾಲ್ಕು ಕೋಟಿ ಜನ ತೆರಿಗೆ ಕಟ್ಟುತ್ತಿದ್ದರು. ಈಗ 7 ಕೋಟಿಗೆ ಹೆಚ್ಚು ಜನ ನೇರ ತೆರಿಗೆ ಪಾವತಿಸುತ್ತಿದ್ದಾರೆ. ಕೇವಲ 60 ಲಕ್ಷ ಜನ ಮಾತ್ರ 60 ವರ್ಷದಿಂದ ತೆರಿಗೆ ಕಟ್ಟುತ್ತಿದ್ದರು. ಈಗ ಅದು ಬಹಳಷ್ಟು ಏರಿಕೆ ಆಗಿದೆ.  
* ಉಜ್ವಲಾ ಯೋಜನೆ ಮೂಲಕ ಬಡವರ ಮನೆಗೆ ಗ್ಯಾಸ್​
* ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್​ ಸಿಕ್ಕಿದೆ.
* ಮನೆ ಮನೆಗೆ ನೀರು ತಲುಪುತ್ತಿದೆ.
* ಡಬ್ಲ್ಯೂಎಚ್​ಒ ವರದಿ ಹೇಳುತ್ತಿದೆ. 3 ಲಕ್ಷ ಮಕ್ಕಳು ಬದುಕುಳಿದಿದ್ದಾರೆ.
* ಇದನ್ನ ವಿಶ್ವಸಂಸ್ಥೆ ಗುರುತಿಸಿದೆ. ಇದೆಲ್ಲ ಸ್ವಚ್ಛತಾ ಆಂದೋಲನದಿಂದ ಸಾಧ್ಯವಾಗಿದೆ. 
* ಗಾಂಧಿಜೀ ಅವರು ಸತ್ಯಾಗ್ರಹಿಗಳನ್ನ ತಯಾರಿಸಿದರು. ಪೂಜ್ಯ ಗಾಂಧಿ ಅವರಿಗೆ ಸ್ವಚ್ಛತಾ ಆಂದೋಲನದ ಮೂಲಕ ಅವರ ಸ್ಪಪ್ನವನ್ನ ಪೂರ್ಣಗೊಳಿಸಿದ್ದೇವೆ. 
* ಟೈರ್​ 2- ಟೈರ್​ -3 ಸಿಟಿಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ 
* ಕೋಟಿ ಕೋಟಿ ಮುದ್ರಾ ಯೋಜನೆ ಅಡಿ ಸಾಲ ನೀಡಲಾಗಿದೆ. ಯುವಕರು ಮುದ್ರಾ ಯೋಜನೆ ಅಡಿ ಸಾಲ ಪಡೆದು ಸ್ವಾವಲಂಬಿಗಳಾಗಿದ್ದಾರೆ.  
* ದೇಶಾದ್ಯಂತ ಇನ್​ಫಾರ್ಮೆಷನ್​ ಟೆಕ್ನಾಲಜಿಯ ಲಾಭವನ್ನ ಜನ ಪಡೆದಿದ್ದಾರೆ.  
* ವಿಶ್ವಕ್ಕೆ ಈಗ ಭಾರತೀಯರ ಅವಶ್ಯಕತೆ ಇದೆ. 
* ದೇಶ ಮುಂದುವರೆಯಲು ಸ್ವಾತಂತ್ರ್ಯ ನಮಗೆ ಅವಕಾಶ ಕಲ್ಪಿಸಿದೆ. 
* ಹಲವು ರಾಜ್ಯಗಳಲ್ಲಿ ಹೆಣ್ಣುಮಕ್ಕಳು ಸಪ್ತ ಸಾಗರ ದಾಟಿ ಬಂದಿದ್ದಾರೆ.  
* ನಮ್ಮ ಸೇನೆ ದೇಶದ ರಕ್ಷಣೆಗೆ ಬದ್ಧವಾಗಿದೆ. ಇದಕ್ಕಾಗಿ ಹಗಲಿರಳು ಶ್ರಮಿಸುತ್ತಿದೆ.  
*  ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಬದ್ಧ 
* ನಮ್ಮ ಸರ್ಕಾರ ಇದಕ್ಕಾಗಿ ಎಲ್ಲ ಪ್ರಯತ್ನವನ್ನ ಮಾಡಿದೆ.
* ಎಲ್ಲರ ಹಕ್ಕುಗಳನ್ನ ರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ 
* ಎಲ್ಲ ಭಾರತೀಯ ಎಲ್ಲೇ ಜೀವಿಸುತ್ತಿರಲಿ.. ಭಾರತ ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಅದನ್ನ ಅವರೆಲ್ಲ ಮಾತನಾಡುತ್ತಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆ ಇದೆ.  
* ಮಹಾತ್ಮ ಗಾಂಧಿ ಅವರ ಆದರ್ಶದ ಮೂಲಕ ದೇಶ ಮುನ್ನಡೆಯುತ್ತಿದೆ. 
* ವೀರ ಸೈನಿಕರಿಗೆ ನಾನು ಶ್ರದ್ಧಾಪೂರ್ವಕ ನಮನಗಳನ್ನ ಸಲ್ಲಿಸುತ್ತಿದ್ದೇನೆ
* ನಮ್ಮ ಸೇನೆ, ಪೊಲೀಸರು ಹಗಲಿರಳು ದೇಶದ ಸೇವೆಯಲ್ಲಿ ನಿರತರಾಗಿದ್ದಾರೆ.  ದೇಶದ ಜನರ ರಕ್ಷಣೆಗೆ ಜೀವ ತ್ಯಾಗ ಮಾಡಿದ್ದಾರೆ. ಇವರೆಲ್ಲರ ಸೇವೆಯಿಂದ ನಾವು ಸುರಕ್ಷಿತವಾಗಿ ಇದ್ದೇವೆ. 
* ದೇಶದಲ್ಲಿ ಇಂದು ಜಿಎಸ್​ಟಿ ಜಾರಿಯಾಗಿದೆ. ಜಿಎಸ್​ಟಿ ಮೊದಲು ಕಠಿಣ ಎನಿಸಿತು. ಆದರೆ ಇಂದು  ಅದು ಅತ್ಯಂತ ಸರಳ ವಿಧಾನವಾಗಿದೆ. ದೇಶದ ಜನರ ಕೆಲಸಕ್ಕೆ ಸರ್ಕಾರ ಮುಡುಪಿಟ್ಟಿದೆ.  
* ಒನ್​ ರ್ಯಾಂಕ್​ ಒನ್​ ಪೆನ್ಷೆನ್​ ಯೋಜನೆ ಜಾರಿಗೆ ತಂದು ಸೈನಿಕರ ಆಶಯ ಈಡೇರಿಸಿದ್ದೇವೆ.
* ನಾವು ದೇಶದ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. 2014ರ ಮೊದಲು ದೇಶದ ಆರ್ಥಿಕತೆ ರಿಸ್ಕ್​ ನಲ್ಲಿತ್ತು. ಆಗ ದೇಶವನ್ನ ಆಳುತ್ತಿದ್ದುದು ಒಬ್ಬ ಆರ್ಥಿಕ ತಜ್ಞ.
* ಭಾರತ ಮಲ್ಟಿ ಟ್ರಿಲಿಯನ್​ ಇನ್​​ವೆಸ್ಟ್ ಮೆಂಟ್​ ಮಾಡುವ ಸಾಮರ್ಥ್ಯ ಹೊಂದಿದೆ.  ಈಗ ಬಿಲಿಯನ್​ ಲೆಕ್ಕ ಇಲ್ಲ ಏನಿದ್ದರು ಟ್ರಿಲಿಯನ್​ ಆರ್ಥಿಕತೆ ಭಾರತದ್ದಾಗಿದೆ. 
* ಭಾರತ ವಿಕಾಸದ ಹೊಸ ಭಾಷ್ಯ ಬರೆದಿದೆ.  
* ನಾವು ವಿಶ್ವದ ದೊಡ್ಡಣ್ಣನಾಗುವತ್ತ ದಾಪುಗಾಲಿಡುತ್ತಿದ್ದೇವೆ
* ನಾಲ್ಕು ವರ್ಷಗಳಲ್ಲಿ ನಾವು ಕೆಲಸ ಮಾಡಿದ್ದೇವೆ
* ಎಲ್ಲರಿಗೂ ಶೌಚಾಲಯ ನೀಡಿದ್ದೇವೆ. 100ರಷ್ಟು ನಮ್ಮ ಸಾಧನೆ ಮುಟ್ಟಿದೆ. 
* 2013ಕ್ಕೆ ಮೊದಲು ಈಗಿನ ನಾಲ್ಕು ವರ್ಷಗಳಲ್ಲಿ ಭಾರಿ ಬದಲಾವಣೆ ಆಗಿದೆ.  
* ಎಲ್ಲರಿಗೂ ಎಲ್​ಪಿಜಿ ಗ್ಯಾಸ್​ ನೀಡಿದ್ದೇವೆ. ನಮ್ಮ ಕೆಲಸವನ್ನ ಸಂಪೂರ್ಣಗೊಳಿಸಿದ್ದೇವೆ.  
* ದೇಶದಲ್ಲಿ ದಾಖಲೆಯ ಮೊಬೈಲ್​ ಫೋನ್​ಗಳ ಉತ್ಪಾದನೆಯಾಗಿದೆ.  
* ದೇಶಾದ್ಯಂತ ಹೊಸ ಹೊಸ ಐಐಟಿ, ಐಐಎಂಗಳ ಸ್ಥಾಪನೆಯಾಗಿದೆ.
* ಹಳ್ಳಿ ಹಳ್ಳಿಗೆ ಡಿಜಿಟಲ್​ ಇಂಡಿಯಾ ಲಾಭ ಪಡೆದಿವೆ.  
* ನಮ್ಮ ದೇಶದ ರೈತರು ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ.  
* ನಮ್ಮ ಸೇನೆ  ಕರುಣೆ, ಸಹನೆ, ಶಾಂತಿಯಿಂದ ದೇಶದ ರಕ್ಷಣೆ ಮಾಡುತ್ತಿದೆ. ನಮ್ಮ ಸೇನೆ ಸರ್ಜಿಕಲ್​ ಸ್ಟ್ರೈಕ್​ ಮಾಡಿ ಶತ್ರುಗಳನ್ನ ಬಡಿದೋಡಿಸಿದೆ. 
* ಮಹಾತ್ಮಗಾಂಧಿ ನೇತೃತ್ವದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.  ಹಲವು ಗಣ್ಯರ ಪ್ರಾಣ ತ್ಯಾಗದಿಂದ ಸ್ವಾತಂತ್ರ್ಯ ಸಿಕ್ಕಿದೆ. 
* ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಹಲವೆಡೆ ಜನ ಸಂಕಷ್ಟ ಎದುರಿಸುತ್ತಿದ್ದಾರೆ.
* ಡಾ. ಅಂಬೇಡ್ಕರ್​ ಅವರ ನೇತೃತ್ವದಲ್ಲಿ  ದೇಶದ ಸಂವಿಧಾನ ರಚನೆಯಾಯಿತು. ಬಡವರು, ದಲಿತರು ಸೇರಿ ಎಲ್ಲ ವರ್ಗದವರಿಗೆ ನ್ಯಾಯ ದೊರಕಿತು. ಇದೆಲ್ಲ ಸಾಧ್ಯವಾಗಿದ್ದು ಡಾ. ಅಂಬೇಡ್ಕರ್​ ಅವರಿಂದ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com