ಸ್ವಾತಂತ್ರ್ಯ ದಿನದಂದು ಕಾಶ್ಮೀರದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರು ಇನ್ಸಾನಿಯತ್, ಕಾಶ್ಮೀತ್, ಜಮುರಿಯತ್ ಎಂದಿದ್ದರು. ಜಮ್ಮು-ಕಾಶ್ಮೀರದ ಪ್ರತಿ ಸಮಸ್ಯೆಯನ್ನು ಜನತೆಯೊಂದಿಗಿನ ಪ್ರೀತಿಯಿಂದ ಬಗೆಹರಿಸಬಹುದೇ ಬದಲು ಬುಲೆಟ್ ಗಳಿಂದಲ್ಲ ಎಂದು ಹೇಳಿದ್ದೇನೆ. ನಮ್ಮ ಸರ್ಕಾರ ಜಮ್ಮು-ಕಾಶ್ಮೀರದ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿಗೂ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.