ಪಾಕಿಸ್ತಾನಕ್ಕೆ ನಿದ್ದೆಯಲ್ಲು ಬೆಚ್ಚಿ ಬೀಳುವಂತೆ ಮಾಡಿದ್ದ ವಾಜಪೇಯಿ!

ಆಪರೇಷನ್ ವಿಜಯ್ ಎಂಬ ಹೆಸರು ಕೇಳಿದರೆ ಭಾರತೀಯರ ಮೈ ರೋಮಾಂಚನಗೊಳ್ಳುತ್ತದೆ. ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರನ್ನು ವೀರಾವೇಶದಿಂದ...
Updated on: 
ನವದೆಹಲಿ: ಆಪರೇಷನ್ ವಿಜಯ್ ಎಂಬ ಹೆಸರು ಕೇಳಿದರೆ ಭಾರತೀಯರ ಮೈ ರೋಮಾಂಚನಗೊಳ್ಳುತ್ತದೆ. ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರನ್ನು ವೀರಾವೇಶದಿಂದ ಹಿಮ್ಮೆಟ್ಟಿಸಿದ ಕಾರ್ಗಿಲ್ ಯುದ್ಧದ ಸವಿನೆನಪಿಗಾಗಿ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸಲಾಗುತ್ತದೆ. 
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿ 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಆಪರೇಷನ್ ವಿಜಯ್ ಎಂಬ ಕಾರ್ಯಾಚರಣೆಯ ಅಡಿಯಲ್ಲಿ ಭಾರತೀಯ ಯೋಧರು ಪಾಕಿಸ್ತಾನವನ್ನು ಬಗ್ಗುಬಡಿದಿದ್ದರು. 
1999ರ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ಕಾರ್ಗಿಲ್ ಯುದ್ಧ ನಡೆದಿತ್ತು. ಈ ಅವಧಿಯಲ್ಲಿ ಪ್ರಧಾನಿಯಾಗಿದ್ದ ಅಟಲ್ ಜೀ ಅವರು ಮೊದಲಿಗೆ ಪಾಕಿಸ್ತಾನದೊಡನೆ ಸ್ನೇಹ ಬಾಂಧವ್ಯ ಬಯಸಿ ದೆಹಲಿಯಿಂದ ಲಾಹೋರ್ ಗೆ ಬಸ್ ಯಾತ್ರೆ ಕೈಗೊಂಡಿದ್ದರು. ಪಾಕ್ ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ನಾವು ಶಾಂತಿಗೂ ಬದ್ಧ ಯುದ್ಧಕ್ಕೂ ಸಿದ್ಧ ಎಂಬ ಧೋರಣೆ ತಳೆದಿದ್ದರು. 
ಆದರೆ ಪಾಪಿ ಪಾಕಿಸ್ತಾನ ಮೂರೇ ತಿಂಗಳಲ್ಲಿ ಬಣ್ಣ ಬದಲಿಸಿ ಯುದ್ಧಕ್ಕೆ ನಿಂತಿತು. ಭಾರತೀಯ ಸೇನೆಗೆ ವಿಶೇಷ ಅಧಿಕಾರ ನೀಡಿದ್ದರು. ಶತ್ರು ರಾಷ್ಟ್ರಕ್ಕೆ ಬುದ್ಧಿ ಕಲಿಸುವಂತೆ ಹೇಳಿದ್ದರು. ಇದು ಶತ್ರು ದೇಶ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿತ್ತು. 
ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇನ್ನು ಶತ್ರು ದೇಶ ಪಾಕಿಸ್ತಾನದ 1000ಕ್ಕೂ ಹೆಚ್ಚು ಸೈನಿಕರನ್ನು ಸದೆ ಬಡಿಯುವಲ್ಲಿ ಭಾರತ ಯಶಸ್ವಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com