ವಾಜಪೇಯಿ ಅಂತ್ಯಸಂಸ್ಕಾರ: ಭೂತಾನ್ ದೊರೆ ಸೇರಿ ಹಲವು ವಿದೇಶಿ ಗಣ್ಯರು ಭಾಗಿ

ಭೂತನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್ ಹಾಗೂ ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಭೂತನ್ ದೊರೆಯಿಂದ ವಾಜಪೇಯಿಗೆ ಅಂತಿಮ ನಮನ
ಭೂತನ್ ದೊರೆಯಿಂದ ವಾಜಪೇಯಿಗೆ ಅಂತಿಮ ನಮನ

ನವದೆಹಲಿ: ಭೂತನ್ ದೊರೆ ಜಿಗ್ಮೆ ಖೇಸರ್ ನಾಮ್ಜಿಲ್ ವಾಂಗ್ಚಕ್  ಹಾಗೂ  ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ  ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ  ಅಂತಿಮ ನಮನ ಸಲ್ಲಿಸಿದ್ದಾರೆ.

ಶ್ರೀಲಂಕಾ ಹಂಗಾಮಿ ವಿದೇಶಾಂಗ ಸಚಿವ ಲಕ್ಷ್ಣಣ್ ಕಿರಿಲ್ಲಾ, ನೇಪಾಳ ವಿದೇಶಾಂಗ ಸಚಿವ ಪ್ರದೀಸ್ ಗ್ಯಾವಾಲಿ, ಪಾಕಿಸ್ತಾನದ ಹಂಗಾಮಿ ಮಾಹಿತಿ ಸಚಿವ ಸಯ್ಯದ್ ಝುಪರ್ ಆಲಿ ಮತ್ತು ಅಪ್ಘಾನಿಸ್ತಾನದ ಹಿರಿಯ ಸಚಿವರು ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ವಾಜಪೇಯಿ ಅವರ ಕೊಡುಗೆ ಇದೆ. ಬಾಂಗ್ಲಾದೇಶ ಜನರಿಗಾಗಿ ಸದೃಢ ಸಹಕಾರವನ್ನು ವಾಜಪೇಯಿ ನೀಡಿದ್ದಾರೆ ಎಂದು  ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬ್ದುಲ್ ಹಸನ್ ಮೊಹಮ್ಮದ್ ಆಲಿ  ಹೇಳಿದ್ದಾರೆ.

 ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಅಲ್ಲಿಗೆ ಆಗಮಿಸಿದ ಅಪಾರ ಪ್ರಮಾಣದ ಗಣ್ಯರು , ಅಭಿಮಾನಿಗಳು ಅಗಲಿದ ಹಿರಿಯ ಚೇತನದ ಅಂತಿಮ ದರ್ಶನ ಪಡೆದುಕೊಂಡರು.
ವಾಜಪೇಯಿ ಪಾರ್ಥಿವ ಶರೀರ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳದತ್ತ  ಸಾಗುತ್ತಿದೆ. ಅಲ್ಲಿ ಸಂಜೆ 4 ಗಂಟೆಗೆ  ಅಂತ್ಯಸಂಸ್ಕಾರದಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com