ವಾಜಪೇಯಿ "ಭಯೋತ್ಪಾದಕ-ಮುಕ್ತ" ಉಪಖಂಡದ ಕನಸು ಕಂಡಿದ್ದರು: ಪಾಕ್ ಕಾನೂನು ಸಚಿವ

ಪಾಕಿಸ್ತಾನದ ಕಾನೂನು ಮತ್ತು ಮಾಹಿತಿ ಸಚಿವ ಸೈಯದ್ ಅಲಿ ಜಾಫರ್ ಇಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದಾರೆ.
ಪಾಕಿಸ್ತಾನದ ಕಾನೂನು ಮತ್ತು ಮಾಹಿತಿ ಸಚಿವ ಸೈಯದ್ ಅಲಿ ಜಾಫರ್, ಸುಷ್ಮಾ ಸ್ವರಾಜ್  ಭೇಟಿ
ಪಾಕಿಸ್ತಾನದ ಕಾನೂನು ಮತ್ತು ಮಾಹಿತಿ ಸಚಿವ ಸೈಯದ್ ಅಲಿ ಜಾಫರ್, ಸುಷ್ಮಾ ಸ್ವರಾಜ್ ಭೇಟಿ
Updated on: 
ನವದೆಹಲಿ: ಪಾಕಿಸ್ತಾನದ ಕಾನೂನು ಮತ್ತು ಮಾಹಿತಿ ಸಚಿವ ಸೈಯದ್ ಅಲಿ ಜಾಫರ್ ಇಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮರಣದ ಬಗ್ಗೆ ಪಾಕಿಸ್ತಾನದ ಪರವಾಗಿ ಸಂತಾಪ ವ್ಯಕ್ತಪಡಿಸಿದ ಅವರು ವಾಜಪೇಯಿ ಅವರು "ಭಯೋತ್ಪಾದಕ-ಮುಕ್ತ" ಉಪಖಂಡದ ಕನಸು ಕಂಡಿದ್ದರು. ಎನ್ನುವುದಾಗಿ ಹೇಳಿದರು.
ವಾಜಪೇಯಿಯವರ ಅಂತ್ಯ ಸಂಸ್ಕಾರಕ್ಕಾಗಿ ದೆಹಲಿಗೆ ಆಗಮಿಸಿದ್ದ ವಿದೇಶೀ ಗಣ್ಯರಲ್ಲಿ ಜಾಫರ್ ಸಹ ಓರ್ವರಾಗಿದ್ದು ಸುಷ್ಮಾ ಸ್ವರಾಜ್ ಜತೆಗಿನ ಸಭೆಯ ಬಳಿಕ ಮಾದ್ಯಮದವರೊಡನೆ ಮಾತನಾಡಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಮಾತುಕತೆಯ ಮೂಲಕ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
"ನಾನು ನಿಮ್ಮ ದುಃಖವನ್ನು ಹಂಚಿಕೊಳ್ಳಲು ಪಾಕಿಸ್ತಾನದ ಜನರ ಪ್ರತಿನಿಧಿಯಾಗಿ ದು ಇಲ್ಲಿಗೆ ಬಂದಿದ್ದೇನೆ ವಾಜಪೇಯಿ ಸಾಹೇಬ್ ದಾರ್ಶನಿಕ ನಾಯಕರಾಗಿದ್ದರು. ಶಾಂತಿಯನ್ನು ಗೌರವಿಸುವ ಜನರು ಪಾಕಿಸ್ತಾನದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಒಳಗೊಂಡು ಎಲ್ಲಾ ಸಮಸ್ಯೆಯನ್ನೂ ನಾವು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ." ಜಾಫರ್  ನುಡಿದರು.
ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆಯಾಗಿದ್ದು ನಾಳೆ ಅವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com