ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ

ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಉಮರ್ ಖಾಲೀದ್ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...
ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ
ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ
ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಉಮರ್ ಖಾಲೀದ್ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ದಾಳಿಯ ಹೊಣೆ ಹೊತ್ತಿದ್ದಾರೆ. 
"ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಗಿಫ್ಟ್ ನೀಡಬೇಕಿತ್ತು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹೇಳಿರುವುದು ಕಂಡುಬಂದಿದೆ. ದಾಳಿಯ ಹೊಣೆ ಹೊತ್ತಿರುವ ಇಬ್ಬರು ವ್ಯಕ್ತಿಗಳು ನಾಳೆ ಪೊಲೀಸರೆದುರು ಶರಣಾಗುವುದಾಗಿ ಹೇಳಿದ್ದಾರೆ. 
ಹೊಣೆ ಹೊತ್ತಿರುವ ಇಬ್ಬರನ್ನು ದರ್ವೇಶ್ ಶಾಪುರ್, ನವೀನ್ ದಲಾಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಿಡಿಯೋದಲ್ಲಿರುವ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com