ವಾಜಪೇಯಿಯ ರಾಷ್ಟ್ರಪತಿ ಅಭ್ಯರ್ಥಿ ಕಲಾಂಗೆ ಕಾಂಗ್ರೆಸ್ ಸಹ ಬೆಂಬಲ ನೀಡಿತ್ತು!

ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 2002ರಲ್ಲಿ ನಡೆದ...
ನಾಮಪತ್ರ ಸಲ್ಲಿಸುತ್ತಿರುವ ಎಪಿಜೆ ಅಬ್ದುಲ್ ಕಲಾಂ
ನಾಮಪತ್ರ ಸಲ್ಲಿಸುತ್ತಿರುವ ಎಪಿಜೆ ಅಬ್ದುಲ್ ಕಲಾಂ
ನವದೆಹಲಿ: ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 2002ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ, ಖ್ಯಾತ ವಿಜ್ಞಾನಿ ಅಬ್ದುಲ್‌ ಕಲಾಂ ಅವರ ಗೆಲುವಿಗಾಗಿ ಎಡರಂಗ ಹೊರತುಪಡಿಸಿ ಅಂದಿನ ಪ್ರಮುಖ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಹಾಗೂ ಇತರೆ ಪ್ರಾದೇಶಿಗಳ ಪಕ್ಷಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಅದೊಂದು ದಿನ, ಚೆನ್ನೈನಲ್ಲಿ ಕಾರ್ಯಕ್ರಮವೊಂದಲ್ಲಿ ಉಪನ್ಯಾಸ ನೀಡುತ್ತಿದ್ದ ಕ್ಷೀಪಣಿ ತಜ್ಞ ಕಲಾಂ ಅವರಿಗೆ ಕರೆ ಮಾಡಿ, ನಾವು ನಿಮ್ಮನ್ನು ರಾಷ್ಟ್ರಪತಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ನೀವು ಸ್ಪರ್ಧಿಸಲು ಒಪ್ಪುವಿರಾ ಎಂದು ಕೇಳಿದ್ದರು. ಆಗ ನನಗೆ ಎರಡು ಗಂಟೆಗಳ ಕಾಲಾವಕಾಶ ಕೊಡಿ ಎಂದು ಕೇಳಿದ್ದ ಅಬ್ದುಲ್‌ ಕಲಾಂ ಅವರು, ತಮ್ಮ ಸ್ನೇಹಿತರನ್ನು ಸಂಪರ್ಕಿಸಿ ಆಗಬಹುದು ಎಂದು ಹೇಳಿದ್ದರು. ಕಡೆಗೆ ಎನ್‌.ಡಿ.ಎ. ಸರ್ಕಾರ ಕಲಾಂ ಅವರನ್ನು ತಮ್ಮ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಿದರೆ, ಎಡಪಕ್ಷಗಳು ಲಕ್ಷ್ಮೀ ಸೆಹಗಲ್‌ ಅವರನ್ನು ಕಣಕ್ಕಿಳಿಸಿದ್ದವು. 
ವಿಶೇಷವೆಂದರೆ, ಆಗ ಪ್ರಮುಖ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌ ಕೂಡ ಕಲಾಂ ಅವರಿಗೆ ಬೆಂಬಲ ನೀಡಿತ್ತು. ಹೀಗಾಗಿ ಕಲಾಂ ಅವರು ನಿರಾಯಾಸವಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ, ಕಲಾಂ ಮತ್ತು ಅಟಲ್‌ ಅವರದ್ದು ಅದ್ಬುತ ಜೋಡಿಯಾಗಿತ್ತು. 2002ರಿಂದ 2004ರವರೆಗೆ ಇಬ್ಬರೂ ಜತೆಗೂಡಿ ಕೆಲಸ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com