2ಸಾವಿರಕ್ಕೂ ಅಧಿಕ ಮಕ್ಕಳ ಆರೈಕೆ ಕೇಂದ್ರಗಳ ನೋಂದಣಿಯಾಗಿಲ್ಲ: ಮನೇಕಾ ಗಾಂಧಿ

ದೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳ ಆರೈಕೆ ಕೇಂದ್ರಗಳು ನೋಂದಣಿ ಮಾಡಿಸಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ .,..
ಮನೇಕಾ ಗಾಂಧಿ
ಮನೇಕಾ ಗಾಂಧಿ
ನವದೆಹಲಿ: ದೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳ ಆರೈಕೆ ಕೇಂದ್ರಗಳು ನೋಂದಣಿ ಮಾಡಿಸಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ನೋಂದಣಿ ಮಾಡಿಸದಿದ್ದರೇ ಅವುಗಳನ್ನು ಮುಚ್ಚುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದರೂ ಅವುಗಳ ನೋಂದಣಿಯಾಗಿಲ್ಲ,. ಇದೇ ವರ್ತನೆ ಮುಂದುವರಿದರೇ ಅವುಗಳನ್ನು ಮುಚ್ಚುವುದಾಗಿ ಹೇಳಿದ್ದಾರೆ,
ಜಾರ್ಖಂಡ್ ನಲ್ಲಿನ ಮಿಷನರಿಗಳಲ್ಲಿ ಅನಧಿಕೃತವಾಗಿ ದತ್ತು  ಪ್ರಕ್ರಿಯೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ  ಕಳೆದ ತಿಂಗಳು ಮನೇಕಾ ಗಾಂಧಿ, ಎಲ್ಲಾ ಮಕ್ಕಳ ಆರೈಕೆ ಕೇಂದ್ರಗಳ ನೋಂದಣಿಗೆ ಆದೇಶಿದ್ದರು.  ಇನ್ನು ಉತ್ತರ ಪ್ರದೇಶದಲ್ಲಿ 24 ಬಾಲಕಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿತ್ತು, 
ಮಕ್ಕಳ ಆರೈಕೆ ಕೇಂದ್ರಗಳ ನೋಂದಣಿ ಕಡ್ಡಾಯ ಕಾಯಿದೆ 2015ರಲ್ಲೇ ಜಾರಿಗೆ ಬಂದಿದ್ದರೂ ಇನ್ನೂ ಈ ಕೇಂದ್ರಗಳು ಅಧಿಕೃತವಾಗಿ ನೋಂದಾಯಿಸಿಕೊಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com