ಮುಕ್ತ ದಾಭೋಲ್ಕರ್
ಮುಕ್ತ ದಾಭೋಲ್ಕರ್

ನನ್ನ ತಂದೆ ಹತ್ಯೆ ನಂತರ ಅದೇ ರೀತಿ ಮೂರು ಹತ್ಯೆಗಳಾಗಿವೆ: ದಾಭೋಲ್ಕರ್ ಪುತ್ರಿ

ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯ ನಂತರ ಅದೇ ಮಾದರಿಯಲ್ಲಿ ಮತ್ತೆ ಮೂವರು ವಿಚಾರವಾದಿಗಳನ್ನು...
ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯ ನಂತರ ಅದೇ ಮಾದರಿಯಲ್ಲಿ ಮತ್ತೆ ಮೂವರು ವಿಚಾರವಾದಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ದಾಭೋಲ್ಕರ್ ಅವರ ಪುತ್ರಿ ಮುಕ್ತ ದಾಭೋಲ್ಕರ್ ಅವರು ಭಾನುವಾರ ಹೇಳಿದ್ದಾರೆ.
ನನ್ನ ತಂದೆ ಹತ್ಯೆಯಾಗಿ ಐದು ವರ್ಷಗಳ ನಂತರ ಪ್ರಮುಖ ಆರೋಪಿಯನ್ನು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ. ದಾಭೋಲ್ಕರ್ ಹತ್ಯೆ ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮತ್ತೆ ಮೂವರು ವಿಚಾರವಾದಿಗಳಾದ ಗೋವಿಂದ್ ಪನ್ಸಾರ್, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ನನ್ನ ತಂದೆಯ ಹತ್ಯೆ ಮಾದರಿಯಲ್ಲೇ ಹತ್ಯೆ ಮಾಡಲಾಗಿದೆ ಎಂದು ಮುಕ್ತ ಎಎನ್ಐ ತಿಳಿಸಿದ್ದಾರೆ.
ಈ ನಾಲ್ವರು ವಿಚಾರವಾದಿಗಳ ಹತ್ಯೆಗೆ ಲಿಂಕ್ ಇದೆ ಎಂದು ತನಿಖಾ ಅಧಿಕಾರಿಗಳು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ತಿಳಿಸಿವೆ. ಇದು ಅತಿ ದೊಡ್ಡ ಸಂಚು ಮತ್ತು ಹತ್ಯೆಗಳಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕಾರಣ ಎಂದು ಮುಕ್ತ ಹೇಳಿದ್ದಾರೆ.
ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ನಿನ್ನೆಯಷ್ಟೇ ಪ್ರಮುಖ ಆರೋಪಿ ಸಚಿನ್ ಪ್ರಕಾಶ್ ರಾವ್ ಅಂಡುರೆಯನ್ನು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಬಂಧಿಸಿದ್ದರು.
ಮೂಢನಂಬಿಕೆ ಮತ್ತು ಮಾಟಮಂತ್ರದ ವಿರುದ್ಧ ಹೋರಾಟ ನಡೆಸಿದ್ದ ವಿಚಾರವಾದಿ, ಲೇಖಕ, ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಧ್ಯಕ್ಷ ನರೇಂದ್ರ ಅಚ್ಯುತ್ ದಾಬೋಲ್ಕರ್ (67) ಅವರನ್ನು 2013ರ ಆಗಸ್ಟ್ 20ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com