ಮುಂಬೈ : ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿಕೊಂಡಿಸಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಧು ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದ್ದು, ಇದು ಅತ್ಯಂತ ನಾಚಿಕೆ ಇಲ್ಲದಂತಹದ್ದು ಎಂದು ಟೀಕಿಸಿದೆ.
ಭ್ರಷ್ಟಾಚಾರವನ್ನು ವಿರೋಧಿಸುವ ಮತ್ತು ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸುವ ಜನರನ್ನು ರಾಷ್ಟ್ರ ವಿರೋಧಿ ಎಂದು ಕರೆಯಲಾಗಿದ್ದರೂ, ಸಿಧು ಅವರನ್ನು ದೇಶದ್ರೋಹಿ ಎಂದು ಹೆಸರಿಸಲಾಗಲಿಲ್ಲ ಎಂದು ಬಿಜೆಪಿ ವಿರುದ್ಧ ಸೇನಾ ವಾಗ್ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲು ಮತ್ತು ಭ್ರಷ್ಟಾಚಾರವನ್ನು ವಿರೋಧಿಸಲು ಜನರನ್ನು "ರಾಷ್ಟ್ರೀಯ ವಿರೋಧಿ" ಎಂದು ಕರೆಯಲಾಗಿದ್ದರೂ, ಸಿಧು ಅವರನ್ನು ದೇಶದ್ರೋಹಿ ಎಂದು ಹೆಸರಿಸಲಾಗಲಿಲ್ಲ ಎಂದು ಬಿಜೆಪಿಯಲ್ಲಿಯೂ ಅದು ಅಂದಾಜಿಸಿದೆ.
ನವಜೋತ್ ಸಿಧು ವಿಶೇಷ ಆಹ್ವಾನಿತರಾಗಿ ಶನಿವಾರ ನಡೆದ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಂಡಿದಲ್ಲದೆ, ಪಿಒಕೆ ಅಧ್ಯಕ್ಷರ ಆಸನದ ಪಕ್ಕದಲ್ಲಿ ಕುಳಿತುಕೊಂಡದ್ದು, ಅತ್ಯಂತ ನಾಚಿಕೆಗೇಡಿತನದು ಎಂದು ಸಾಮ್ನಾದಲ್ಲಿ ಶಿವಸೇನೆ ಕಿಡಿಕಾರಿದೆ.
ಈ ಹಿಂದೆ ಪಾಕಿಸ್ತಾನ ಪ್ರಧಾನಿಯಾಗಿದ್ದ ನವಾಜ್ ಷರೀಪ್ ಅವರನ್ನು ಪ್ರಧಾನಿ ಮೋದಿ ಆಲಂಗಿಸಿಕೊಂಡಿದದ್ದು ದೊಡ್ಡ ಹೊಡೆತ ಆಗಿರುವುದರಿಂದ ಈಗ ಹೇಗೆ ಸಿಧು ಒಬ್ಬರನೇ ಟೀಕಿಸಲು ಸಾಧ್ಯ ಎಂದು ಹೇಳಲಾಗಿದೆ.
ಮೊದಲು ಬಿಜೆಪಿಯಲ್ಲಿದ್ದ ಸಿಧು ಈಗ ಕಾಂಗ್ರೆಸ್ ಸೇರಿದ್ದಾರೆ. ಸಂಸ್ಕಾರದ ಬಗ್ಗೆ ಬೊಬ್ಬೆ ಹೊಡೆಯುವ ಬಿಜೆಪಿ ಸಿಧುವಿಗೆ ಸರಿಯಾದ ಪಾಠ ಕಲಿಸಿಲ್ಲ.ಪ್ರಧಾನಮಂತ್ರಿ ಬಲವಾದ ಕ್ರಮಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಾರೆ, ಮತ್ತು ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು ಬಯಸಿದವರ ವಿರುದ್ಧ ಇದೇ ನಿಷೇಧವನ್ನು ನೀಡಬಹುದಿತ್ತು" ಎಂದು ಸಾಮ್ನಾ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
Advertisement