ಯಾತ್ರಾರ್ಥಿಗಳಿಲ್ಲದೆ ಅಮರನಾಥ ಯಾತ್ರೆ ಸ್ಥಗಿತ!

ಸಾಕಷ್ಟು ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲದೆ ಇರುವ ಕಾರಣ ಇಂದು ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದುಗೊಳಿಸಲಾಗಿದೆ!
ಅಮರನಾಥ
ಅಮರನಾಥ
ಜಮ್ಮು: ಸಾಕಷ್ಟು ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲದೆ ಇರುವ ಕಾರಣ ಇಂದು ಜಮ್ಮುವಿನಿಂದ ಹೊರಡಬೇಕಿದ್ದ ಅಮರನಾಥ ಯಾತ್ರೆಯನ್ನು ರದುಗೊಳಿಸಲಾಗಿದೆ! . ಬೇಸ್ ಕ್ಯಾಂಪ್ ನಲ್ಲಿ ಯಾತ್ರಿಕರ ಆಗಮನದ ಆಧಾರದ ಮೇಲೆ ಯಾತ್ರೆ ಪುನಾರಂಬ ಆಗಲಿದೆ ಎಂದು  ಮೂಲಗಳು ತಿಳಿಸಿವೆ.
ಇದೇ ವೇಳೆ ಪೂಂಚ್ ಜಿಲ್ಲೆಯ ಭಗವತಿ ನಗರ ಬೇಸ್ ಕ್ಯಾಂಪ್ ನಿಂದ 449  ಯಾತ್ರಾರ್ಥಿಗಳ ತಂಡ ಅಮರನಾಥ ದರ್ಶನಕ್ಕೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಿನ್ನೆ, 43 ಯಾತ್ರಿಕರ ಚಿಕ್ಕ ತಂಡವು ದಕ್ಷಿಣ ಕಾಶ್ಮೀರ ಹಿಮಾಲಯದ 3,880 ಮೀಟರ್ ಎತ್ತರದ ಪವಿತ್ರ ಗುಹಾ ದೇವಾಲಯ ದರ್ಶನಕ್ಕಾಗಿ ತೆರಳಿದ್ದಿತು."ಯಾತ್ರಾರ್ಥಿಗಳಾರೂ ಆಗಮಿಒಸದೆ ಇದ್ದ ಕಾರಣ ಈ ಸಮಯ ಯಾತ್ರೆಯನ್ನು ನಿಲ್ಲಿಸಲಾಗಿದೆ.ಎಂದು ಅಧಿಕಾರಿಗಳು ಹೇಳಿದರು. ಭಕ್ತರು ಮತ್ತೆ ಯಾತ್ರೆಗಾಗಿ ಬೇಸ್ ಕ್ಯಾಂಪ್ ಗೆ ಆಗಮಿಸಿದ್ದಾದರೆ ಪುನಃ ಯಾತ್ರೆ ಆರಂಭವಾಗಲಿದೆ.ಆಗಸ್ಟ್ 26 ರಂದು ತೀರ್ಥಯಾತ್ರೆ ಮುಕ್ತಾಯಗೊಳ್ಳುವ ಮೊದಲು ಬಂದವರಿಗೆ ದೇವಾಕ್ಲಯದಲ್ಲಿ ಪೂಜೆಗೆ ಅವಕಾಶ ಒದಗಿಸಲಾಉತ್ತದೆ. ಎಂದು ಅವರು ಹೇಳಿದ್ದಾರೆ.
ಬಾಲ್ತಾಲ್ ಮತ್ತು ಪಹಲ್ಗಾಂಮ್ ಅವಳಿ ಮಾರ್ಗಗಳಿಂದ 60 ದಿನ ಯಾತ್ರೆ ಜೂನ್ 28 ರಂದು ಪ್ರಾರಂಭವಾಗಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.ನಿನ್ನೆ (ಸೋಮವಾರ) ಸಂಜೆವರೆಗೆ 2,83,140 ಯಾತ್ರಿಕರು ಗುಹಾ ದೇವಾಲಯಕ್ಕೆ ಭೇಟಿನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com