ವಿಶ್ವವಿದ್ಯಾನಿಲಯ, ಕಾಲೇಜು ಕ್ಯಾಂಪಸ್ ಗಳಲ್ಲಿ ಜಂಕ್ ಫುಡ್ ನಿಷೇಧ

ದೇಶದ ಎಲ್ಲಾ ವಿಶ್ವವಿದ್ಯಾನಿಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳಲ್ಲಿ ಜಂಕ್ ಫುಡ್ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ)....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಎಲ್ಲಾ ವಿಶ್ವವಿದ್ಯಾನಿಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳಲ್ಲಿ ಜಂಕ್ ಫುಡ್ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ನಿರ್ದೇಶನ ನೀಡಿದೆ.
"ಕಾಲೇಜುಗಳಲ್ಲಿ ಜಂಕ್ ಫುಡ್ ಗಳ ನಿಷೇಧಿಸಬೇಕು. ವಿದ್ಯಾರ್ಥಿಗಳ  ಆರೋಗ್ಯ ದೃಷ್ಟಿಯಿಂದ  ಮತ್ತು ಸ್ಥೂಲಕಾಯರಾಗುವುದನ್ನು ತಪ್ಪಿಸಲು ಈ ಕ್ರಮ ಜರುಗಿಸಲಾಗುತ್ತದೆ. ಇದರೊಡನೆ  ಆರೋಗ್ಯಕರ ಆಹಾರಕ್ಕಾಗಿ ಹೊಸ ಮಾನದಂಡಗಳನ್ನು ರೂಪಿಸಲಾಗುವುದು. ಜಂಕ್ ಫುಡ್ ನಿಷೇಧದಿಂದ ತೂಕ ಹೆಚ್ಚಲದೊಡನೆ ನೇರ ಸಂಪರ್ಕ ಹೊಂದಿ ಅನೇಕ ಖಾಯಿಲೆಗಳು ಬರುವುದನ್ನು ತಪ್ಪಿಸಬಹುದು" ಎಂದು ಯುಜಿಸಿ ಹೇಳಿದೆ.
ಉನ್ನತ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜಂಕ್ ಫುಡ್ ಮಾರಾಟವನ್ನು ನಿಷೇಧಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಯುಜಿಸಿ ಈ ಸುತ್ತೋಲೆಯನ್ನು ಹೊರಡಿಸಿದೆ.
"ಈ ಸುತ್ತೋಲೆಯಲ್ಲಿರುವ ನಿರ್ದೇಶನಕ್ಕೆ ನೀವು ಕಟಿಬದ್ದವಾಗಿರಬೇಕು. ಯುವ ಪೀಳಿಗೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು" ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಇದೇ ರೀತಿಯ ಕ್ರಮವನ್ನು ಈ ಮುನ್ನ ಸಿಬಿಎಸ್ಇ ಸಹ ತೆಗೆದುಕೊಂಡಿತ್ತು. ಇದು ಎಲ್ಲಾ ಅಂಗಸಂಸ್ಥೆ, ಶಾಲಾ ಕ್ಯಾಂಟೀನ್ ಗಳಲ್ಲಿ ಜಂಕ್ ಫುಡ್ ಮಾರಾಟವನ್ನು ನಿಷೇಧಿಸಿದ್ದಿತು.ಅಲ್ಲದೆ ವಿದ್ಯಾರ್ಥಿಗಳು ಊಟದ ಮೆನು ಪರಿಶೀಲನೆ, ಪೌಷ್ಟಿಕಾಂಶದ ಆಹಾರದ ಕುರಿತು ಜಾಗೃತಿ, ದ್ಯಾರ್ಥಿಗಳ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಅದು ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com