ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ನಿಧನ

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು
ಗುರುದಾಸ್ ಕಾಮತ್
ಗುರುದಾಸ್ ಕಾಮತ್
ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ  63 ವರ್ಷ ವಯಸ್ಸಾಗಿತ್ತು
ಉಸಿರಾಟ ತೊಂದರೆಯಲ್ಲಿದ್ದ ಕಾಮತ್ ಅವರನ್ನು ಚಾಣಕ್ಯಪುರಿಯಲ್ಲಿನ  ಪ್ರಿಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
ಇಂದು (ಬುಧವಾರ) ಬೆಳಿಗ್ಗೆ 7 ಕ್ಕೆ ಅವರಿಗೆ ಹಠಾತ್ ಉಸಿರಾಟದ ತೊಂಡರೆ ಕಾಣಿಸಿದ್ದು ಅವರ ಸಹಾಯಕನಿಗೆ ದೂರಿತ್ತಿದ್ದ್ದಾರೆ, ತಕ್ಷಣ ಕಾರ್ಯಪ್ರವೃತ್ತರಾದ ಸಹಾಯಕ ಅವರನ್ನು ಕಾರಿನಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಮೂಲಗಳು ಹೇಳಿದೆ. ಅವರು ತಮ್ಮ ಖಾಸಗಿ ನಿವಾಸ - ವಸಂತ್ ಎನ್ ಕ್ಲೇವ್ ನಲ್ಲಿ ಒಬ್ಬರೇ ವಾಸವಿದ್ದರು.
ಕಳೆದ ರಾತ್ರಿ ಸುಮಾರು 11.44ಕ್ಕೆ ತಮ್ಮೆಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿ ಕಾಮತ್ ಟ್ವೀಟ್ ಮಡಿದ್ದರು.
ಪ್ರಸ್ತುತ ಮೃತರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆಯಲು ಅವರ ಕುಟುಂಬ ಮುಂಬೈಗೆ ಆಗಮಿಸಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಗಲಿದ ಮುಖಂಡರಿಗೆ ಗೌರವ ಸಲ್ಲಿಸಿದ್ದಾರೆ. ಅವರ ಹಠಾತ್ ಮರಣ ಕಾಂಗ್ರೆಸ್ ಪಕ್ಷಕ್ಕೆ ಆಘಾತ ತಂದಿದೆ ಎಂದು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಾಮತ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಮುಂಬೈಯಿಂದ ಐದು ಬಾರಿ ಸಂಸತ್ತಿನ ಸದಸ್ಯರಾಗಿದ್ದ ಅವರು 1976 ರಿಂದ 1980 ರವರೆಗೆ ಎನ್ಎಸ್ ಯುಐ ಅಧ್ಯಕ್ಷರಾಗಿದ್ದರು.
ಅವರು 2009 ರಿಂದ 2011 ರವರೆಗೆ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಹೆಚ್ಚುವರಿ ಖಾತೆ ಹೊಂದಿದ್ದರಲ್ಲದೆ ಗೃಹ ವ್ಯವಹಾರಗಳ ಇಲಾಖೆ ರಾಜ್ಯ ಸಚಿವರಾಗಿದ್ದರು.
ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಕಾಮತ್ ಜುಲೈ 2011 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ವೃತ್ತಿಯಲ್ಲಿ ವಕೀಲರಾಗಿದ್ದ ಕಾಮತ್ ಮುಂಬೈಯ ಆರ್. ಎ ಪೋಡರ್ ಕಾಲೇಜಿನಿಂದ ವಾಣಿಜ್ಯ ಪದವಿ, ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು.
ಗುರುದಾಸ್ ಕಾಮತ್ ನಿಧನಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com