ಆಫ್ ಲೈನ್ ಮೋಡ್ ನಲ್ಲಿ ಒಂದೇ ದಿನ ನೀಟ್ ಪರೀಕ್ಷೆ: ಹೆಚ್ ಆರ್ ಡಿ ಇಲಾಖೆ ಸ್ಪಷ್ಟನೆ

ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಲು ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲೇ ನಡೆಸಬೇಕು ಹಾಗೂ ಒಂದೇ ದಿನದಂದು ನಡೆಸಬೇಕೆಂದು ಹೆಚ್ ಆರ್ ಡಿ ಇಲಾಖೆ ನಿರ್ಧರಿಸಿದೆ.

ಹೊಸದಾಗಿ ರಚನೆಯಾಗಿರುವ ರಾಷ್ಟೀಯ ಟೆಸ್ಟಿಂಗ್ ಏಜೆನ್ಸಿ ನೀಟ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿ ಒಂದೇ ದಿನಾಂಕದಂದು ಆಯೋಜಿಸಲಿದೆ ಎಂದು ಕೇಂದ್ರ  ಮಾನವ ಸಂಪನ್ಮೂಲ ಇಲಾಖೆ ಸ್ಪಷ್ಟಪಡಿಸಿದೆ. ಮೇ.05 ರಂದು ಪರೀಕ್ಷೆ ನಡೆಯಲಿದೆ. ಈ ಹಿಂದೆ ನೀಟ್ ಕುರಿತು ಪ್ರಕಟಿಸಿದ್ದ ಹೆಚ್ ಆರ್ ಡಿ ಇಲಾಖೆ, ಮುಂದಿನ ವರ್ಷದಿಂದ ಆನ್ ಲೈನ್ ಮೋಡ್ ನಲ್ಲಿ ಒಂದಕ್ಕಿಂತ ಹೆಚ್ಚು ದಿನಾಂಕಗಳಲ್ಲಿ ನೀಟ್ ಪರೀಕ್ಷೆ ನಡೆಸುವುದಾಗಿ ಹೇಳಿತ್ತು.  
ಜುಲೈ ನಲ್ಲಿ ಈ ಜೆಇಇ ಪರೀಕ್ಷೆ ಹಾಗೂ ನೀಟ್ ಪರೀಕ್ಷೆ ಬಗ್ಗೆ ಮಾತನಾಡಿದ್ದ ಹೆಚ್ ಆರ್ ಡಿ ಸಚಿವ ಪ್ರಕಾಶ್ ಜಾವ್ಡೇಕರ್, ದೇಶದ ಎರಡು ಪ್ರತಿಷ್ಠಿತ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳನ್ನು ಆನ್ ಲೈನ್ ಮೋಡ್ ನಲ್ಲಿ ನಡೆಸಲಾಗುವುದು ಎಂದಿದ್ದರು. ಆದರೆ ಹೆಚ್ ಆರ್ ಡಿ ಸಚಿವಾಲಯ ನೀಟ್ ಪರೀಕ್ಷೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಹರಸಾಹಸಪಡುತ್ತಿದೆ ಆದ್ದರಿಂದ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿರಲಿಲ್ಲ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯಗಳಲ್ಲಿ ಗೊಂದಲ ಸ್ಥಿತಿ ಇದ್ದು, ಪಠ್ಯಕ್ರಮಕ್ಕೆ ಸಂಬಂಧಿಸಿದಂತೆಯೂ ವಿದ್ಯಾರ್ಥಿಗಳು ಗೊಂದಲ ಎದುರಿಸುತ್ತಿದ್ದಾರೆ. ಈ ಹಂತದಲ್ಲಿ ಆನ್ ಲೈನ್ ಮೋಡ್ ನಲ್ಲಿ ಪರೀಕ್ಷೆ ನಡೆಸಿದರೆ ಅದು ಮತ್ತಷ್ಟು ಸಮಸ್ಯೆ ಉಂಟು ಮಾಡಲಿದೆ ಎಂಬ ಕಾರಣಕ್ಕಾಗಿ  ಆಫ್ ಲೈನ್ ಮೋಡ್ ನಲ್ಲೇ ನಡೆಸಬೇಕೆಂದು ತೀರ್ಮಾನಿಸಲಾಗಿದ್ದು, ಒಂದೇ ದಿನಾಂಕದಂದು ಪರೀಕ್ಷೆ ನಡೆಸಲು ಹೆಚ್ ಆರ್ ಡಿ ಇಲಾಖೆ ನಿರ್ಧರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com