ನೀರವ್ ಮೋದಿ, ಮೆಹುಲ್ ಚೋಕ್ಸಿಯ ಅಕ್ರಮ ಬಂಗಲೆಗಳು ನೆಲಸಮ: ಮಹಾರಾಷ್ಟ್ರ ಸರ್ಕಾರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮತ್ತು ದೇಶದ್ರೋಹಿ ಆರೋಪ ...
ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ
ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮತ್ತು ದೇಶದ್ರೋಹಿ ಆರೋಪ ಹೊತ್ತಿರುವ ನೀರವ್ ಮೋದಿ ಮತ್ತು ಅವರ ಮಾವ ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಅಕ್ರಮ ಬಂಗಲೆಗಳನ್ನು ಕೆಡವಲಾಗುವುದು ಎಂದು ಮಹಾರಾಷ್ಟ್ರ ಪರಿಸರ ಖಾತೆ ಸಚಿವ ರಾಮದಾಸ್ ಕದಮ್ ತಿಳಿಸಿದ್ದಾರೆ.

ಬಂಗಲೆ ರಾಯಘಡ ಜಿಲ್ಲೆಯ ಅಲಿಬಾಗ್ ನಲ್ಲಿ 121 ಬಂಗಲೆಗಳು ಮತ್ತು ಮುರುದ್ ಪಟ್ಟಣದಲ್ಲಿ 151 ಬಂಗಲೆಗಳಿವೆ ಅವು ಅಕ್ರಮವಾದದ್ದು ಎಂದು ಹೇಳಿದ್ದಾರೆ. ಇವುಗಳಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿರುವ ಬಂಗಲೆಗಳು ಕೂಡ ಇವೆ. ಮಹಾರಾಷ್ಟ್ರ ಸರ್ಕಾರ ಅಕ್ರಮ ಬಂಗಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ರಾಯಘಡ ಜಿಲ್ಲಾಧಿಕಾರಿಗೆ ಇವುಗಳನ್ನು ಕೂಡಲೇ ಕೆಡವುವಂತೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಇವುಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com