ವಾಜಪೇಯಿ ಅವರು ಚತ್ತೀಸ್ ಗಢವನ್ನು ಪ್ರತ್ಯೇಕ ರಾಜ್ಯವನ್ನಾಗಿಸಿದಾಗಿನಿಂದ ಹಿಡಿದು ಈ ವರೆಗೂ ರಮಣ್ ಸಿಂಗ್ ಹಾಗೂ ಅವರ ಸಚಿವ ಸಂಪುಟ ವಾಜಪೇಯಿ ಅವರನ್ನು ಎಂದಿಗೂ ಸ್ಮರಿಸಿಲ್ಲ. ರಮಣ್ ಸಿಂಗ್ ತಮ್ಮ ಭಾಷಣದಲ್ಲಿ ಒಮ್ಮೆಯೂ ಅಟಲ್ ಜೀ ಅವರ ಹೆಸರನ್ನು ಉಲ್ಲೇಖಿಸಿಲ್ಲಆದರೆ ಈಗ ರಾಜಕೀಯ ಲಾಭಕ್ಕಾಗಿ ವಾಜಪೇಯಿ ಅವರ ಚಿತಾ ಭಸ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕರುಣಾ ಶುಕ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.