ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನಿರುದ್ಯೋಗ, ಅಪನಗದೀಕರಣದಿಂದ ಜನರಲ್ಲಿ ಆಕ್ರೋಶ, ಅದೇ ಸಾಮೂಹಿಕ ಹತ್ಯೆಗಳಿಗೆ ಕಾರಣ: ರಾಹುಲ್

ಬಿಜೆಪಿ ಸರ್ಕಾರ ಜಾರಿಗೆ ತಂದ ನೋಟ್ ಬ್ಯಾನ್, ಕಳಪೆ ರೀತಿಯಲ್ಲಿ ಅನುಷ್ಟಾನಗೊಂಡ ಜಿಎಸ್ಟಿ ನೀತಿಯಿಂದಾಗಿ ದೇಶದಲ್ಲಿ ಉದ್ಯೋಗಾವಕಾಶದ ಕೊರತೆ ಇದ್ದು ....
Published on
ನವದೆಹಲಿ: ಬಿಜೆಪಿ ಸರ್ಕಾರ ಜಾರಿಗೆ ತಂದ ನೋಟ್ ಬ್ಯಾನ್, ಕಳಪೆ ರೀತಿಯಲ್ಲಿ ಅನುಷ್ಟಾನಗೊಂಡ ಜಿಎಸ್ಟಿ ನೀತಿಯಿಂದಾಗಿ ದೇಶದಲ್ಲಿ ಉದ್ಯೋಗಾವಕಾಶದ ಕೊರತೆ ಇದ್ದು ಇದರಿಂದ ಯುವಸಮುದಾಯದಲ್ಲಿ ಕ್ರೋಧ ಉಂಟಾಗಿದೆ. ಇದೇ ಕ್ರೋಧದಿಂದ ದೇಶದಲ್ಲಿ ಸಮೂಹಿಕ ಹಲ್ಲೆ, ಹತ್ಯೆಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಮಾಡಿರುವ ಭಾಷಣವೊಂದರಲಿ ರಾಹುಲ್ಜನರು ಅಭಿವೃದ್ಧಿಯ ಪ್ರಕ್ರಿಯೆಯಿಂದ ಹೊರಗಿಳಿದರೆ ಪರಿಣಾಮವು ಇದೇ ಆಗಿರಲಿದೆ. ಮನೆಗಳಲ್ಲಿ ಈ ಕುರಿತು ಎಚ್ಚರಿಕೆ ನೀಡಬೇಕಿದೆ. ಇಲ್ಲದೆ ಹೋದಲ್ಲಿ ಇಸಿಸಿ ನಂತಹಾ ಇನ್ನಷ್ಟು ಸಂಘಟನೆಗಳು ಹುಟ್ಟುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
"21 ನೇ ಶತಮಾನದಲ್ಲಿ ಜನರನ್ನು ಅಭಿವೃದ್ದಿ ಪ್ರಕ್ರಿಯೆಯಿಂದ ಹೊರಗಿತ್ಟಿರುವುದು ಬಹಳವೇ ಅಪಾಯಕಾರಿ ಬೆಳವಣಿಗೆ." ಎಂದು ದೂರಿರುವ ರಾಹುಲ್  ದಲಿತರು ಮತ್ತು ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗಿಟ್ಟ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾಗತಿಕವಾಗಿ ನಡೆಯುತ್ತಿರುವ ಬದಲಾವಣೆಗಳಿಂದ ಜನರಿಗೆ ರಕ್ಷಣೆ ಬೇಕಿದೆ. ಆದರೆ ಭಾರತ ಸರ್ಕಾರದ ಅಪನಗದೀಕರಣ, ಜಿಎಸ್ಟಿ ನೀತಿಯಿಂದ ಇಂತಹಾ ಆರ್ಥಿಕ ರಕ್ಷಣೆಯಿಂದ ಜನ ದೂರವಾಗಿದ್ದಾರೆ.ಇದು ಜನರಲ್ಲಿ ಕೋಪವನ್ನು ಹುತ್ಟಿಸಿದೆ, ಇದೇ ಕೋಪವು ಇಂದು ಸಾಮೂಹಿಕ ಹತ್ಯೆಗೆ ಕಾರಣವಾಗಿದೆ ಎಂದು ರಾಹುಲ್ ಹೇಳಿದರು.
"ಬುಡಕಟ್ಟು ಸಮುದಾಯಗಳು, ಬಡ ರೈತರು, ಕೆಳ ಜಾತಿ ಜನರು, ಅಲ್ಪಸಂಖ್ಯಾತರು ಆರ್ಥಿಕತೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವರು ಅಭಿವೃದ್ದಿಯ ಲಾಭಗಳಿಂಡ ದೂರವಿರಬೇಕೆಂದು ಬಿಜೆಪಿ ಸರ್ಕಾರ ಭಾವಿಸಿದೆ.ಕೆಲವೇ ಜನರಿಗೆ ಅನುಕೂಲವಾಗುವುದಕ್ಕಾಗಿ ಬೆಂಬಲಿತ ಸಂರಚನೆಗಳನ್ನು ಸರ್ಕಾರ ಮಾಡಿದ್ದು ಇದು ದೊಡ್ಡ ಪ್ರಮಾಣದ ಹಾನಿಯಷ್ಟೇ ಅಲ್ಲ ಅಪಾಯಕಾರಿಯಾದದ್ದೂ ಹೌದು." ಎಂದಿರ್ತುವ ರಾಹುಲ್ ಎರಡು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ "ಸಣ್ಣ ಮತ್ತು ಮದ್ಯಮ ಮಟ್ಟದ ಉದ್ಯಮಗಳ ಕತ್ತು ಹಿಸುಕುವ ಕೆಲಸ ಮಾಡಿದ್ದಾರೆ.ಕ ಮತ್ತು ಆರ್ಥಿಕ ವ್ಯವಹಾರಗಳನ್ನು ದುರ್ಬಲಗೊಳಿಸಿದರು ಎಂದು ಹೇಳಿದ್ದಾರೆ.
ಭಾರತದಲ್ಲಿ ಇಂದು ಹೆಚುತ್ತಿರುವ ದಲೈತರ ಮೇಲಿನ ದಾಳಿ, ಅಲ್ಪಸಂಖ್ಯಾತರ ಮೇಲಿನ ದಾಲೀಗಳಿಗೆ ಸಹ ಸರ್ಕಾರದ ಈ ಕೆಟ್ಟ ನೀತಿಗಳೇ ಕಾರಣ ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದರು,. 
ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಇದೆ, ಆದರೆ ಪ್ರಧಾನಿ ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಎಂದು ರಾಹುಲ್ ಆರೋಪಿಸಿದ್ದು "ನೀವು ಸಮಸ್ಯೆಯನ್ನು ಮೊದಲು ಒಪ್ಪಿಕೊಳ್ಳಿ, ಬಳಿಕ ಬಗೆಹರಿಸಿ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com